ಪೂರ್ಣಚಂದ್ರ ತೇಜ್

ಕುಶಾಲನಗರ, ನ. 17: ಕುಶಾಲನಗರದ ನಾಡಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಸಾರ್ವಜನಿಕರಿಗೆ ಜನಸಂಪರ್ಕ ಸಭೆ ಏರ್ಪಡಿಸಲಾಗಿತ್ತು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕ ಪೂರ್ಣಚಂದ್ರ ತೇಜ್ ಅವರಿಗೆ ಸಾರ್ವಜನಿಕರು ಹಾಗೂ ನೆರೆ ಸಂತ್ರಸ್ತರು ತಮ್ಮ ಅಹವಾಲುಗಳನ್ನು ನೀಡಿದರು.

ಯಾವದೇ ಸಂದರ್ಭ ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರು ಕೆಲಸ ಮಾಡುವ ಸಂದರ್ಭ ಅಧಿಕಾರಿಗಳು ಅಥವಾ ಸಿಬ್ಬಂದಿ ಹಣದ ಬೇಡಿಕೆ ಇಟ್ಟಲ್ಲಿ ದೂರು ಸಲ್ಲಿಸಬಹುದು ಎಂದು ಪೂರ್ಣಚಂದ್ರ ತೇಜ್ ತಿಳಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಮಧುಸೂದನ್, ಗ್ರಾಮ ಲೆಕ್ಕಾಧಿಕಾರಿ ಗೌತಮ್, ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಪ್ರವೀಣ್, ಸುರೇಶ್, ಲೋಹಿತ್ ಉಪಸ್ಥಿತರಿದ್ದರು.