ಮಡಿಕೇರಿ, ನ. 16: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಮಡಿಕೇರಿ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಕಣರ್ಂಗೇರಿ ಟಿ.ಕೆ. ಕೃಷ್ಣ ಎಂಬಾತ 2017ರ ಜುಲೈ 17ರಂದು 2ನೇ ಮೊಣ್ಣಂಗೇರಿಯ ಅಪ್ರಾಪ್ತೆ ಪರಿಶಿಷ್ಟ ಜಾತಿಯ ಯುವತಿ ಕಾಲೇಜಿಗೆ ಹೋದ ಸಂದರ್ಭದಲ್ಲಿ ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದಿದ್ದ. ನಂತರ ಅಲ್ಲಿನ ದೇವಾಲಯಕ್ಕೆ ಕರೆದೊಯ್ದು ತಾಳಿಕಟ್ಟಿ ಬಾಡಿಗೆ ಮನೆ ಪಡೆದಿದ್ದ. ಆಗಸ್ಟ್ 11ರವರೆಗೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಎಂಬ ದೂರಿನ ಮೇಲೆ ಮೊಕದ್ದಮೆ ದಾಖಲಾಗಿತ್ತು.ಈ ಬಗ್ಗೆ ವಿಚಾರಣೆ ನಡೆದು ಇಂದು ತೀರ್ಪಿತ್ತ ನ್ಯಾಯಾಧೀಶ ಡಿ. ಪವನೇಶ್ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪ್ರಾಪೆÀ್ತ ಬಾಲಕಿಯ ಅಪಹರಣ ಅಪರಾಧ ಹಿನ್ನಲೆಯಲ್ಲಿ 4 ವರ್ಷ ಸಜೆ ಮತ್ತು 4 ಸಾವಿರ ದಂಡ ಹಾಗೂ ಅಪ್ರಾಪೆÀ್ತ ವಯಸ್ಸಿನ ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ಬಾಲಕಿಯನ್ನು ಮದುವೆಯಾಗುವದಾಗಿ ನಂಬಿಸಿ ಅತ್ಯಾಚಾರ ಎಸಗುವ ಉದ್ದೇಶದಿಂದ ಅಪಹರಣ ಮಾಡಿದ ಅಪರಾಧಕ್ಕಾಗಿ 7 ವರ್ಷ ಕಠಿಣ ಸಜೆ ಮತ್ತು 6 ಸಾವಿರ ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 7,500 ಅನ್ನು ನೊಂದ ಬಾಲಕಿಗೆ ನೀಡಲು ಆದೇಶಿಸಲಾಗಿದೆ. ಸರ್ಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದ್ದರು.