ಮಡಿಕೇರಿ, ನ. 17: ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿ-ತಾಳತ್‍ಮನೆ, ಸಂಪಾಜೆ ಮಾರ್ಗದಲ್ಲಿ ತಾ. 18 ರಿಂದ ಮುಂದಿನ ಆದೇಶದವರೆಗೆ ಕೆಲ ನಿರ್ಬಂಧಗಳಿಗೊಳಪಟ್ಟು ವಾಹನ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಎಲ್‍ಸಿವಿ ಹೊರತುಪಡಿಸಿ ಎಲ್‍ಸಿವಿ ತರಹಕ್ಕಿಂತ ಮಿಗಿಲಾದ ಸಾಮಥ್ರ್ಯವಿರುವ ಎಲ್ಲಾ ರೀತಿಯ ಸರಕು ಸಾಗಾಣೆ ಮಾಡುವ ವಾಹನಗಳು, ಭಾರೀ ಗಾತ್ರದ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಉಳಿದಂತೆ ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ಮಾಡುವ ಸಿಂಗಲ್ ಆಕ್ಸಿಲ್ ವಾಹನಗಳು, ಹಾಲು ಪೂರೈಕೆ ಮಾಡುವ ಸಿಂಗಲ್ ಆಕ್ಸಿಲ್ ವಾಹನಗಳು, ಸರಕಾರಿ ಕೆಲಸದ ನಿಮಿತ್ತ, ರಸ್ತೆ ಕಾಮಗಾರಿ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ-ಕಾಲೇಜು ವಾಹನಗಳು, ಕಾರು, ಜೀಪು, ದ್ವಿಚಕ್ರ ವಾಹನಗಳು, ವ್ಯಾನ್, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವೆಲ್ಲರ್, ಎಲ್ಲಾ ತರದ ಸಾಮಾನ್ಯ ಬಸ್‍ಗಳು, ರಾಜಹಂಸ, ಐರಾವತ, ಖಾಸಗಿ ಲಕ್ಸುರಿ ಬಸ್‍ಗಳು ಹಾಗೂ ಎಲ್‍ಸಿವಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶಿಸಿದ್ದಾರೆ.