ಗೋಣಿಕೊಪ್ಪ ವರದಿ, ನ. 17 : ಸಾಮಾಜಿಕ ನೀತಿಯನ್ನು ಬಿತ್ತರಿಸುವ ಮೂಲಕ ವಿಶ್ವ ಕಲ್ಯಾಣದ ಗುರಿಯೊಂದಿಗೆ ಆರ್‍ಎಸ್‍ಎಸ್ ಇಂದು ಬೃಹತ್ ಸಂಘಟನೆಯಾಗಿ ಬೆಳೆದು ನಿಂತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅಭಿಪ್ರಾಯಪಟ್ಟರು.ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ವೀರಾಜಪೇಟೆ ತಾಲೂಕು ಆರ್‍ಎಸ್‍ಎಸ್ ವತಿಯಿಂದ ಆಯೋಜಿಸಿದ್ದ ಸಾಂಘಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ವಿಶ್ವದಲ್ಲಿ ಉತ್ತಮ ಆಡಳಿತ, ಶಿಕ್ಷಣ, ತಾಯಂದಿಯರ ಬೆಳವಣಿಗೆ, ಸಾಮಾಜಿಕ ನೀತಿ, ಸುರಕ್ಷೆ ಇಂತಹವಗಳನ್ನೇ ದೃಷ್ಟಿಕೋನವಾಗಿಟ್ಟು ಕೊಂಡು ನಡೆದು ಬಂದ ಕಾರಣ ಈ ಮಟ್ಟದಲ್ಲಿ ಬೆಳೆದು ನಿಲ್ಲಲು ಸಹಕಾರಿಯಾಗಿದೆ. ಇದೆಲ್ಲವೂ ಈಗ ಜಗತ್ತಿಗೆ ತಿಳಿದಿದೆ ಎಂದರು.
ಹಿಂದೂಗಳು ಅಸಂಘಟಿತ, ವಿಘಟಿತ ಎಂಬ ಮಾತುಗಳಿಂದ ಮಾತ್ರ ಕರೆಯಲ್ಪಟ್ಟಿತ್ತು. ಆದರೆ, ಕಳೆದ 8 ದಶಕಗಳಿಂದ ಸಂಘಟಿತರಾಗುವ ಮೂಲಕ ವಿಶ್ವ ಅಪೇಕ್ಷೆ ಪಡುವಂತ ಸಂಸ್ಕøತಿ ಬಿಂಬಿಸುವ ಮೂಲಕ ತನ್ನತ್ತ ಸೆಳೆಯುವಂತೆ ಮಾಡಿದೆ ಎಂದರು. ಸಂಘವು ಹೆಚ್ಚು ಸಂಘಟಿತರಾಗಿದ್ದರಿಂದ ಮತ್ತೆ ಚೈತನ್ಯಗೊಂಡಿದೆ ಎಂದರು. ಆರ್‍ಎಸ್‍ಎಸ್ ಸರಳ ಚಟುವಟಿಕೆ ಮೂಲಕ ಸಂಘಟಿತವಾಗುತ್ತಿದೆ. ಆಟ, ಶಿಕ್ಷಣ, ಸಂಸ್ಕøತಿ ಮೂಲಕ ಒಂದಾಗುತ್ತಿದೆ. ಇದರ ಫಲವಾಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವಂತ ಸ್ವಯಂ ಸೇವಕರು ಇದ್ದಾರೆ ಎಂದರು.
ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಅಧಿಕ ಗಣವೇಷದಾರಿಗಳಿಂದ ಸಾಮೂಹಿಕ ಯೋಗ ಅಭ್ಯಾಸ ನಡೆಯಿತು. ಸುಮಾರು 2 ಗಂಟೆ ಕಾರ್ಯಕ್ರಮ ನಡೆಯಿತು.
(ಮೊದಲ ಪುಟದಿಂದ) ಈ ಸಂದರ್ಭ ಪ್ರಾಂತ್ಯ ಸಹಸಂಘಚಾಲಕ ಗೋಪಾಲ್ ಚೆಟ್ಯಾರ್, ಜಿಲ್ಲಾ ಸಂಘಚಾಲಕ ಚೆಕ್ಕೇರ ಮನು ಕಾವೇರಪ್ಪ, ತಾಲೂಕು ಸಂಘ ಚಾಲಕ ಕುಟ್ಟಂಡ ಪ್ರಿನ್ಸ್ ಗಣಪತಿ ಉಪಸ್ಥಿತರಿದ್ದರು. ವರದಿ- ಸುದ್ದಿಪುತ್ರ