ಮಡಿಕೇರಿ, ನ. 16: ಬಿಜಾಪುರದಲ್ಲಿ ನಡೆದ ಬಾಲಕ-ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶಮ್ರಿದ್ ಪಿ.ಎ., ಆಕಾಶ್ ಕೆ.ಸಿ., ಇಜಾಜ್ ಅಹ್ಮದ್, ಶಾನಿದ್, ಶರಣ್‍ಕುಮಾರ್, ಹೇಮಂತ್, ಬೋಪಣ್ಣ ಕೆ.ಕೆ., ವಿಕ್ರಮ್ ಟಿ.ಎಸ್., ಹರ್ಷಾದ್ ಕೆ.ಎ., ಜಸ್ವನ್ ಜೆ., ಶೋಯೆಲ್ ಜಯನ್ ಎಂ. ಹಾಗೂ ಬಾಲಕಿಯರ ವಿಭಾಗದಲ್ಲಿ ಪೂವಮ್ಮ ಕೆ.ಎಚ್., ಅಲ್ಮಜ್ ಎಂ.ಎ., ಹರ್ಷಿತ ಬಿ.ಸಿ., ಕೃತಿ ಪಿ.ಜೆ. ಭಾಗವಹಿಸಿದ್ದರು.

ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಬೋಪಣ್ಣ ಕೆ.ಕೆ., ಮೋನಿಷ್ ಮಂದಣ್ಣ, ಪೂವಮ್ಮ ಕೆ.ಎಚ್., ಅಲ್ಮಸ್ ಎಂ.ಎ., ಕೃತಿ ಪಿ.ಜೆ. ಪಾಲ್ಗೊಂಡಿದ್ದರು.

ಗುಲ್ಬರ್ಗಾ ಮತ್ತು ಕೋಲಾರದಲ್ಲಿ ನಡೆಯುವ ರಾಜ್ಯಮಟ್ಟದ ಬಾಲಕರ ಹ್ಯಾಂಡ್‍ಬಾಲ್ ಮತ್ತು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜಿನ ಸೇವನ್ ಡಿ.ಸಿ., ಅನಿಲ್ ಕೆ.ಜೆ., ಸನಲ್ ಟಿ.ಆರ್., ಆದರ್ಶ ಎಚ್.ಎನ್., ತಿಮ್ಮಯ್ಯ, ಅಪ್ಜಲ್, ಸೋಮಯ್ಯ, ಸೋಯೆಲ್ ಜಯನ್ ಎಂ., ಧನುಷ್ ಎಸ್.ಪಿ., ಚರಣ್ ಎಸ್., ಜಸಿಮ್ ಡಿ.ಎಂ., ಜಸ್ವನ್ ಜೆ., ವಿಜೇಶ್ ಇವರುಗಳು ಭಾಗವಹಿಸಲಿದ್ದಾರೆ. ಅಲ್ಲದೇ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ನಡೆದ ರಾಜ್ಯಮಟ್ಟದ ನೆಟ್‍ಬಾಲ್ ಪಂದ್ಯಾವಳಿಯಲ್ಲಿಯೂ ಇವರುಗಳು ಭಾಗವಹಿಸಿದ್ದಾರೆ.

ಹರಿಯಾಣದ ರೋಟ್ಹಕ್‍ನಲ್ಲಿ ನಡೆಯುವ 13ನೇ ರಾಷ್ಟ್ರೀಯ ಬಾಲಕ/ಬಾಲಕಿಯರ ಫ್ಲೋರ್‍ಬಾಲ್ ಪಂದ್ಯಾವಳಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಬೋಪಣ್ಣ ಕೆ.ಕೆ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಶಮ್ರಿದ್ ಪಿ.ಎ. ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ರಾಜಸ್ತಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪದವಿಪೂರ್ವ ವಿಭಾಗದ 65ನೇ ರಾಷ್ಟ್ರೀಯ ಫುಟ್‍ಬಾಲ್ ಪಂದ್ಯಾವಳಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.ಬೋಪಣ್ಣ ಪಿ.ಟಿ., ಚವನ್‍ಚಂಗಪ್ಪ ಪಿ.ಎಸ್., ಲವಿನ್ ಅಯ್ಯಪ್ಪ ಪಿ.ಡಿ., ಶಮಂತ್ ಎಚ್.ಎಂ., ಮೋನಿಷ್‍ಮಂದಣ್ಣ, ಕಾವೇರಪ್ಪ ಕೆ.ಎ., ಅಜಿತ್ ಭೀಮಯ್ಯ ಹಾಗೂ ವಿದ್ಯಾರ್ಥಿನಿಯರಾದ ಪೂವಮ್ಮ ಕೆ.ಎಚ್., ಕೃತಿ ಪಿ.ಜೆ., ಗಾನ ವಿ.ಎಸ್., ರಶ್ಮಿತಾ ಎಂ., ಪ್ರಿಯಾಂಕ ಜಿ., ಆಲ್ಮಾಸ್ ಅವರುಗಳು ಭಾಗವಹಿಸಲಿದ್ದಾರೆ.

ಕಾಲೇಜಿನ ದೈಹಿಕ ಶಿಕ್ಷಕರಾದ ಸಂತೋಷ್ ಎಂ.ಟಿ. ಮತ್ತು ಸುಬ್ಬಯ್ಯನವರು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು.