ವೀರಾಜಪೇಟೆ, ನ.15: ವೀರಾಜಪೇಟೆಯ ಕೊಡಗು ಜಿಲ್ಲಾ ನಿವೃತ್ತ ಉದ್ಯೋಗಸ್ಥರ ಸಂಘದ 2017-18ರ ಸಾಲಿನ ವಾರ್ಷಿಕ ಮಹಾಸಭೆ ತಾ. 19ರಂದು ಬೆಳಿಗ್ಗೆ 10:45 ಗಂಟೆಗೆ ಕಾರು ನಿಲ್ದಾಣದ ಸಮೀಪವಿರುವ ಡಿ.ಸಿ.ಸಿ.ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಸಂಘದ ಅಧ್ಯP ಸಿ.ಜಿ. ದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರುಗಳಾದ ದೇವಣಗೇರಿ ಗ್ರಾಮದ ಪುಗ್ಗೇರ ಟಿ.ಅಯ್ಯಪ್ಪ ಹಾಗೂ ಎವ್ಲಿನ್ ಪೆರಿಸ್ ಅವರನ್ನು ಸನ್ಮಾನಿಸಲಾಗುವದು. ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಳ್ಳಲಾಗಿದೆ.