ಶ್ರೀಮಂಗಲ, ನ. 15: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟದ ಬಗ್ಗೆ ಒಂದು ಲಕ್ಷ ಹೆಕ್ಟೇರ್ ಪ್ರದೇಶದ ಸಮೀಕ್ಷೆ ನಡೆಸಲಾಗಿದ್ದು, ಸರ್ಕಾರದ ನಿಯಮದಂತೆ ಶೇ 33 ಮೇಲ್ಪಟ್ಟು ಬೆಳೆ ನಷ್ಟವಾಗಿದ್ದರೆ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿರುವ ಬೆಳೆಗಾರರ ಖಾತೆಗಳಿಗೆ ಪರಿಹಾರ ಹಣ ಸಂದಾಯವಾಗಲಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಹೇಳಿದರು.

ಶ್ರೀಮಂಗಲ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಶ್ರೀಮಂಗಲ ಹೋಬಳಿ ಜನಸಂಪರ್ಕ ಸಭೆಯಲ್ಲಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಶಂಕರು ನಾಚಪ್ಪ ಅವರ ಅಹವಾಲಿಗೆ ಉತ್ತರಿಸಿ ಈ ವಿಷಯ ತಿಳಿಸಿದರು.

ಶ್ರೀಮಂಗಲ ಗ್ರಾ.ಪÀಂ ಮಾಜಿ ಅಧ್ಯಕ್ಷ ಡಾಲಿಚಂಗಪ್ಪ ಅವರು ಬೆಳೆಗಾರರು ತಮ್ಮ ಸ್ವಂತ ಕೆಲಸಕಷ್ಟೇ ಪಿಕಪ್ ವಾಹನವನ್ನು ಬಳಸುತ್ತಿದ್ದಾರೆ. ಇದಕ್ಕೆ ಪ್ರತಿ ವರ್ಷ ಆರ್.ಟಿ.ಓ ಮೂಲಕ ಎಫ್.ಸಿ ಮಾಡುತ್ತಿರು ವದನ್ನು ಕನಿಷ್ಟ 5 ವರ್ಷಕ್ಕೆ ಮಾಡುವಂತೆ ರಿಯಾಯಿತಿ ಮಾಡಬೇಕು ಹಾಗೂ ಸ್ಥಳಿಯ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಕೊರತೆ ಕಾಡುತ್ತಿದ್ದು ಸ್ಥಳೀಯ ನದಿ ತೋಡುಗಳಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಯವರು ಆರ್.ಟಿ.ಓ ಅಧಿಕಾರಿ ಸಭೆಗೆ ಹಾಜರಿರುವದಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು. ನದಿ ಹಾಗೂ ಗ್ರಾಮದ ರಕ್ಷಣೆಗಾಗಿ ಜೂನ್‍ನಿಂದ ಡಿಸೆಂಬರ್‍ವರೆಗೆ ಮರಳು ತೆಗೆಯುವದನ್ನು ನಿಷೇಧಿಸಲಾಗಿದೆ. ಜನವರಿಯಿಂದ ಸರ್ಕಾರದಿಂದ ಟೆಂಡರ್ ಆಗಿರುವ ಯಾರ್ಡ್‍ಗಳಿಂದ ಜಿಪಿಎಸ್ ಇರುವ ಅಧಿಕೃತ ವಾಹನಗಳಲ್ಲಿ ಮಾತ್ರ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯವಿರುವವರು ಸರ್ಕಾರದ ಎಂ.ಸ್ಯಾಂಡ್‍ಗಳನ್ನು ಬಳಸಬಹುದು. ಆದರೆ ಎಂ.ಸ್ಯಾಂಡ್ ಮಾಡಲು ಕ್ರಷರ್‍ಗೆ ಎಲ್ಲಾ ಕಾನೂನು ರೀತಿಯಲ್ಲಿ ಪರಿಶೀಲಿಸಿ ಅನುಮತಿ ಕೊಡುತ್ತೇವೆÉ. ಆದರೆ ಇದುವರೆಗೆ ಯಾವದೇ ಅನುಮತಿ ಕೋರಿ ಅರ್ಜಿ ಬಂದಿಲ್ಲ. ಅದು ಹೊರತುಪಡಿಸಿ ಅಕ್ರಮ ಮರಳು ಸಾಗಾಟ ಹಾಗೂ ಅಕ್ರಮವಾಗಿ ಮರಳು ತೆಗೆಯುವದು ಕ್ರಿಮಿನಲ್ ಅಪರಾಧÀವಾಗಿದೆ. ಈ ಬಗ್ಗೆ ಎಸ್.ಪಿ. ಅವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿರುವದಾಗಿ ಹೇಳಿದರು.

ಅಜ್ಜಮಾಡ ಚಂಗಪ್ಪ ಅವರು ಗ್ರಾಮಸ್ಥರ ಪರವಾಗಿ ಮನವಿ ಪತ್ರ ನೀಡಿ ಕುರ್ಚಿ ಹಾಗೂ ಬೀರುಗ ಗ್ರಾಮಗಳಿಗೆ ವಿದ್ಯುತ್ ಕಡಿತ ಉಂಟಾಗುತ್ತಿದೆ. ಈ ಭಾಗದ ಜನರು ವನ್ಯಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಟ ಮಾಡ ಬೇಕಾದ ಪರಿಸ್ಥಿತಿ ಎದುರಾಗಿದೆ. ಈ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ಸ್ಥಿರ ದೂರವಾಣಿ ಹಾಗೂ ಮೊಬೈಲ್ ದುಸ್ಥಿತಿಯಲ್ಲಿದೆ. ಇರ್ಪು ದೇವಸ್ಥಾನ ಮತ್ತು ಲಕ್ಷ್ಮಣತೀರ್ಥ ಉಗಮ ಸ್ಥಾನದಲ್ಲಿ ಪ್ರವಾಸಿಗರ ನಿಯಂತ್ರಣಕ್ಕೆ ದಿನಂಪ್ರತಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಸೆಸ್ಕಾಂನ ಎ.ಇ.ಇ. ಅಂಕಯ್ಯ, ವೃತ್ತ ನಿರೀಕ್ಷಕ ರಾಜು ಅವರಿಂದ ಮಾಹಿತಿ ಪಡೆದು ಕೂಡಲೇ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಟಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷ ಮಚ್ಚಮಾಡ ಸುಮಂತ್ ಅವರ ಮನವಿಗೆ ಜಿಲ್ಲಾಧಿಕಾರಿಯವರು ಉತ್ತರಿಸಿ ಮನೆಕಟ್ಟಲು ಕೃಷಿಯೇತರ ಭೂಪರಿವರ್ತನೆಗೆ ಮಧ್ಯವರ್ತಿಗಳು ನಮ್ಮ ಕಛೇರಿಯಲ್ಲಿ ವ್ಯವಹರಿಸುತ್ತಿರು ವದನ್ನು ಪತ್ತೆ ಹಚ್ಚಿ ಹಲವರ ಮೇಲೆ ಕೇಸು ಹಾಕಲಾಗಿದೆ. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಸದ್ಯಕ್ಕೆ ಭೂಪರಿವರ್ತನೆ ಸ್ಥಗಿತಗೊಳಸ ಲಾಗಿದೆ. ಇದು ಕೇವಲ ಭೂಕುಸಿತ ಕ್ಕೊಳಗಾದ ಉತ್ತರ ಕೊಡಗಿಗೆ ಸೀಮಿತವಾಗದೆ ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರು ವದರಿಂದ ಇಡೀ ಜಿಲ್ಲೆಯ ವ್ಯಾಪ್ತಿಯಲ್ಲಿ ಭೂಪರಿವರ್ತನೆ ಯನ್ನು ಮುಂದಿನ ಸರ್ಕಾರದ ಆದೇಶ ದವರೆಗೆ ನಿಲ್ಲಿಸಲಾಗಿದೆ ಎಂದು ಹೇಳಿದರು.

ಕೊಡಗು ಬೆಳೆಗಾರರ ಒಕ್ಕೂಟದಿಂದ 2014-15 ರಲ್ಲಿ ಅತಿವೃಷ್ಟಿ ಬೆಳೆನಷ್ಟಕ್ಕೆ ಜಿಲ್ಲೆಯ 123 ಗ್ರಾಮಕ್ಕೆ ನೀಡಬೇಕಾದ ಪರಿಹಾರ ಬಾಕಿ ಇದ್ದು ಕೂಡಲೇ ನೀಡಬೇಕು. ಹಲವು ವರ್ಷದಿಂದ ಅತಿವೃಷ್ಟಿ ಅನಾವೃಷ್ಟಿಯಿಂದ ನಿರಂತರ ಬೆಳೆನಷ್ಟದಿಂದ ಸಂಕಷ್ಟದಲ್ಲಿದ್ದು ಬ್ಯಾಂಕ್‍ಗಳು ಸಾಲಮರುಪಾವತಿಗೆ ಬಲತ್ಕಾರ ಮಾಡದಂತೆ ಹಾಗೂ ಸುಸ್ತಿದಾರರ ಮೇಲೆÉ ಕಾನೂನು ಕ್ರಮ ಕೈಗೊಳ್ಳದಂತೆ ಮನವಿ ಮಾಡಿದರು. 2014-15 ರ ಬೆಳೆಪರಿಹಾರ ಬಾಕಿ ಇರುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದರು.

ಜಿಲ್ಲಾ ರೈತಸಂಘದಿಂದ ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಭತ್ತ ಕೃಷಿಗೆ ಹೆಕ್ಟೇರ್‍ಗೆ 25 ಸಾವಿರ ಪ್ರೋತ್ಸಾಹ ಧನ, ಅತಿವೃಷ್ಟಿಗೆ ತುತ್ತಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ಬೆಳೆಗಾರರ ಸಾಲಮನ್ನಾ, ಹುಲಿ ಧಾಳಿಯಿಂದ ಸಾವಿಗೀಡಾದ ಜಾನುವಾರುಗಳಿಗೆ 50 ಸಾವಿರ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.

ಕೆ.ಬಾಡಗದ ಬೊಳ್ಳೇರ ವಿನಯ್ ಅಪ್ಪಯ್ಯ ಮನವಿ ಸಲ್ಲಿಸಿ ಕೇರಳ, ಕೊಡಗು ಗಡಿ ಕುಟ್ಟ ಚೆಕ್ ಪೋಸ್ಟ್‍ನಲ್ಲಿ ಆರ್.ಟಿ.ಓ ಚೆಕ್ ಪೋಸ್ಟ್ ತೆರೆಯಬೇಕು. ಇಲ್ಲಿ ವ್ಯಾಪಕವಾಗಿ ಸಾರಿಗೆ ನಿಯಮ ಉಲ್ಲಂಘಿಸಿ ವಾಹನ ಸಂಚಾರ ವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯವರ ಗಮನ ಸೆಳೆದರು. ವೇದಿಕೆಯಲ್ಲಿ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು, ತಾ.ಪಂ. ಕಾರ್ಯ ನಿರ್ವಹಣಾಧಿ ಕಾರಿ ಜಯಣ್ಣ, ಜಿ.ಪಂ. ಸದಸ್ಯ ಶಿವುಮಾದಪ್ಪ ಉಪಸ್ಥಿತರಿದ್ದರು.