ಶನಿವಾರಸಂತೆ, ನ. 14: ಕೊಡ್ಲಿಪೇಟೆ ಹೋಬಳಿಯ ಬೆಸೂರು ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರದ ಶ್ರೀ ಗೌಡನಕೆರೆ ಅಮ್ಮನವರ ಸನ್ನಿಧಿಯಲ್ಲಿ ತಾ. 13 ರಿಂದ ಜನವರಿ 13ರ ವರೆಗೆ ಹರಕೆ ಬಲಿ ಕೊಡುವದನ್ನು ನಿಷೇಧಿಸಲಾಗಿದೆ.

ಡಿ. 23 ರಂದು ಬೆಳಿಗ್ಗೆ 9 ರಿಂದ ದೇವತಾ ಪ್ರಾರ್ಥನೆ, ಪುಣ್ಯಹ, ಗುರುಗಣಪತಿ ಪೂಜೆ, ಮಹಾಗಣಪತಿ ಹೋಮ, ಶ್ರೀ ಚಂಡಿಕಾ ಹೋಮ, ಮಧ್ಯಾಹ್ನ 12 ಗಂಟೆಗೆ ಪುಣ್ಯಾಹುತಿ, 12.30 ಗಂಟೆಗೆ ಮಹಾಪೂಜೆ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.