ಕುಶಾಲನಗರ, ನ. 13: ಕುಶಾಲನಗರ ರೋಟರಿ ಆಶ್ರಯದಲ್ಲಿ ವಲಯ ಮಟ್ಟದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಸ್ಥಳೀಯ ಎಂಜಿಎಂ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ರೋಟರಿ ಜಿಲ್ಲಾ 3181ರ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿದರು. ಕುಶಾಲನಗರ ರೋಟರಿ ಅಧ್ಯಕ್ಷ ಕೆ.ಎಂ.ಜೇಕಬ್ ಅಧ್ಯಕ್ಷತೆಯಲ್ಲಿ ನಡೆದ ರೋಟರಿ ಕುಟುಂಬ ಸದಸ್ಯರ ಸುಗ್ಗಿ ಸಂಭ್ರಮ ಸಮಾರಂಭದಲ್ಲಿ ವಲಯದ ಮಡಿಕೇರಿ, ಗೋಣಿಕೊಪ್ಪ, ಹುಣಸೂರು, ಪಿರಿಯಾಪಟ್ಟಣ, ಸೋಮವಾರಪೇಟೆ ರೋಟರಿ ಕ್ಲಬ್ ಸದಸ್ಯರು ಮತ್ತು ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಏಕಪಾತ್ರ ಅಭಿನಯ ಮತ್ತಿತರ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕøತಿಕ ಸಮಿತಿ ಜಿಲ್ಲಾ ಅಧ್ಯಕ್ಷ ಮಹೇಶ್ ನಾಲ್ವಡೆ, ಕೇಶವ ಪ್ರಸಾದ್ ಮುಳಿಯ, ಕ್ರಿಜ್ವಲ್ ಕೋಟ್ಸ್, ಪಿ.ಆರ್. ನವೀನ್, ಪ್ರೇಮ್ಚಂದ್ರನ್ ವಿವಿಧ ಕ್ಲಬ್ಗಳ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.