57 ರಂತೆ ಅರ್ಜಿ ಸಲ್ಲಿಸಲು ಅವಕಾಶ ಮಡಿಕೇರಿ, ನ. 14: ಸರಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94-ಎ (4)ಗೆ ತಿದ್ದುಪಡಿ ತರಲಾಗಿದೆ. ಇದೀಗ ಹೊಸ ಆದೇಶವೊಂದು ಜಾರಿಯಾಗಿದೆ. ಇದರಂತೆ ಕರ್ನಾಟಕ ಭೂಕಂದಾಯ ನಿಯಮಗಳು, 1966ರ ನಿಯಮ 108 ಸಿ.ಸಿ ಅನ್ನು ಸೇರ್ಪಡಿಸಿ ಹೊಸದಾಗಿ ನಮೂನೆ -57ರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಅಕ್ರಮ - ಸಕ್ರಮಕ್ಕೆ ನಮೂನೆ 53ರಡಿ ಅರ್ಜಿ ಸಲ್ಲಿಸಲು ಇದ್ದ ಅವಕಾಶ 1999ಕ್ಕೆ ಮುಕ್ತಾಯಗೊಂಡಿದ್ದು, ನಂತರ ಇದಕ್ಕೆ ಅವಕಾಶವಿರಲಿಲ್ಲ.

ಇದೀಗ ಹೊಸದಾಗಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸುವ ಕ್ರಮಕ್ಕೆ ಅವಕಾಶ ನೀಡಲಾಗಿದೆ. ಆದರೆ ಈ ಹಿಂದೆ ನಮೂನೆ 53 ರಂತೆ ಅರ್ಜಿ ಸಲ್ಲಿಸಿ ಈ ಅರ್ಜಿ ತಿರಸ್ಕøತಗೊಂಡಿರುವ ಪ್ರಕರಣಕ್ಕೆ ಮರು ಅವಕಾಶವಿಲ್ಲ. ಅರ್ಜಿದಾರರ ಬಳಿ ಇರುವ ಜಾಗ ಮೂಲ ಸೇರಿ ಒಟ್ಟು 4.95 ಎಕರೆ ಜಾಗದಷ್ಟು ಮಾತ್ರ ಸರಕಾರಿ ಜಾಗದಲ್ಲಿನ ಸಾಗುವಳಿಯನ್ನು ಮಾತ್ರ ಪರಿಗಣಿಸಲಾಗುವದು. ಇದಕ್ಕಿಂತ ಹೆಚ್ಚು ಜಾಗ ಹೊಂದಿರುವವರಿಗೆ ಈ ಅವಕಾಶವಿಲ್ಲ. ನಮೂನೆ 57ರ ಕುರಿತು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಂದ ತಾ. 29.10.18ರಂದು ಸುತ್ತೋಲೆ ಹೊರಡಿಸಲಾಗಿದೆ.

ನಿರ್ಬಂಧಿತ ಅಂತರವನ್ನು ನಿರ್ಧಾರ ಮಾಡುವಾಗ ನೇರ ಅಂತರವನ್ನು ಅಳತೆ ಮಾಡಿಸಿ ತೀರ್ಮಾನ ಕೈಗೊಳ್ಳಲು ಈ ಪ್ರಕ್ರಿಯೆಯನ್ನು ಸಕ್ಷಮ ಪ್ರಾಧಿಕಾರವಾದ ಭೂ ಮಾಪನ ಇಲಾಖೆಯ ಉಪನಿರ್ದೇಶಕರಿಂದ ದೃಢೀಕೃತ ಮಾಹಿತಿಯನ್ನು ಪಡೆದು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಕಲಂ 94(ಎ) (4) ರಡಿಯಲ್ಲಿ ಜಿಲ್ಲೆಯ ಯಾವ ಗ್ರಾಮಗಳಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ಅವಕಾಶವಿದೆ.

(ಮೊದಲ ಪುಟದಿಂದ) ಆ ಗ್ರಾಮಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟ ಪಡಿಸಲು ತಿಳಿಸಲಾಗಿದೆ.

ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರರು ಸ್ವೀಕರಿಸುವಂತೆ ಹಾಗೂ ಅವುಗಳನ್ನು ಅರ್ಜಿ ಸ್ವೀಕರಿಸಿದ ಜೇಷ್ಠತೆ ಆಧಾರದಲ್ಲಿ ನಮೂನೆ -58ರ ರಿಜಿಸ್ಟರ್‍ನಲ್ಲಿ ದಾಖಲಿಸಬೇಕು. ಅರ್ಜಿದಾರರಿಂದ ಸ್ವೀಕರಿಸಿದ ಅರ್ಜಿ ಶುಲ್ಕವನ್ನು ಈ ಹಿಂದೆ 94 ಸಿ ಮತ್ತು 94 ಸಿ.ಸಿ ರಡಿಯಲ್ಲಿ ಸ್ವೀಕರಿಸಿರುವ ಅರ್ಜಿಗಳ ಶುಲ್ಕವನ್ನು ಜಮಾ ಮಾಡುವ ಲೆಕ್ಕಶೀರ್ಷಿಕೆಯಡಿಯಲ್ಲಿಯೇ ಸದರಿ ಅರ್ಜಿ ಶುಲ್ಕವನ್ನು ಸಹ ಜಮಾ ಮಾಡುವಂತೆ ಎಲ್ಲಾ ತಹಶೀಲ್ದಾರರುಗಳಿಗೆ ಸೂಚಿಸುವಂತೆ ಹಾಗೂ ಈ ಬಗ್ಗೆ ಯಾವದೇ ದೂರುಗಳು ಬಾರದಂತೆ ಎಚ್ಚರ ವಹಿಸಲು ಕಂದಾಯ ಇಲಾಖೆ (ಭೂ ಮಂಜೂರಾತಿ)ಯ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಎಲ್. ಮಹಾಂತೇಗೌಡ ಅವರು ಆಯಾ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.