ಶನಿವಾರಸಂತೆ, ನ. 13: ಶನಿವಾರಸಂತೆಯಲ್ಲಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಲಯನ್ಸ್ ಕ್ಲಬ್ ಆಫ್ ಹುಣಸೂರು ಸೆಂಟೀನಿಯಲ್ ಸಂಭ್ರಮ ಶನಿವಾರಸಂತೆ ಹಾಗೂ ಬಿ.ಜಿ.ಎಸ್. ಅಪೋಲೋ ಆಸ್ಪತ್ರೆ ಮೈಸೂರು ಇವರ ಸಹಯೋಗದೊಂದಿಗೆ ಭಾರತಿ ವಿದ್ಯಾಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಹೆಚ್ಚುವರಿ ಚಿಕಿತ್ಸೆಗಾಗಿ ಆದಿಚುಂಚನಗಿರಿ ಬಾಲಗಂಗಾಧರನಾಥ ನಗರದ ಆಸ್ಪತ್ರೆಗೆ ಸುಮಾರು 150 ಮಂದಿ ಶಿಬಿರಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಆಸ್ಪತ್ರೆಯ ವಾಹನದಲ್ಲಿ ಕರೆದೊಯ್ಯಲಾಯಿತು. ಈ ಸಂದರ್ಭ ಶನಿವಾರಸಂತೆ ಹೋಬಳಿಯ ಲಯನ್ಸ್ ಅಧ್ಯಕ್ಷ ರವಿಕಾಂತ್ ಎಸ್.ಎಸ್. ಗೌಡ, ಕಾರ್ಯದರ್ಶಿ ಬಿ.ಕೆ. ಚಿಣ್ಣಪ್ಪ, ಖಜಾಂಚಿ ಎಂ.ಆರ್. ನಿರಂಜನ್, ಉಪಾಧ್ಯಕ್ಷರುಗಳಾದ ಎನ್.ಬಿ. ನಾಗಪ್ಪ, ಬಿ.ಸಿ. ಧರ್ಮಪ್ಪ, ಜಿ. ನಾರಾಯಣ ಸ್ವಾಮಿ, ಗೌರವ ಸದಸ್ಯ ನರೇಶ್‍ಚಂದ್ರ ಹಾಗೂ ಇತರ ಸದಸ್ಯರು ಹಾಜರಿದ್ದರು.