ಮಡಿಕೇರಿ, ನ. 13: ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಹಲವು ರೀತಿಯಲ್ಲಿ ತೊಂದರೆಗೊಳಗಾಗಿ ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳಿಗೆ ಮಡಿಕೇರಿಯ ಗಣಪತಿ ಕೊಡವ ಕೇರಿಯ ಮೂಲಕ ನೆರವು ನೀಡಲಾಯಿತು.
ದುರಂತದ ಹಿನ್ನೆಲೆ ಪ್ರಸಕ್ತ ವರ್ಷದ ಕೈಲು ಮುಹೂರ್ತ ಸಂತೋಷ ಕೂಟವನ್ನು ರದ್ದುಗೊಳಿಸಿರುವ ಕೇರಿಯ ಸದಸ್ಯರು ರೂ. 60 ಸಾವಿರವನ್ನು ಕ್ರೋಢೀಕರಿಸಿ ವಿದ್ಯಾರ್ಥಿ ಗಳಿಗೆ ನೆರವಾಗಲು ವಿದ್ಯಾಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ನಿನ್ನೆ ವಿದ್ಯಾಸಂಸ್ಥೆಗೆ ತೆರಳಿದ ಕೇರಿಯ ಅಧ್ಯಕ್ಷ ಚೆರ್‍ಮಂದಂಡ ಮಣಿ ಪೊನ್ನಪ್ಪ, ಕಾರ್ಯದರ್ಶಿ ಚೆಂಬಾಂಡ ಮುತ್ತಪ್ಪ, ಪದಾಧಿಕಾರಿಗಳಾದ ಬೋಳಂದಂಡ ಸುಶೀಲಾ, ಅರೆಯಡ ಶಶಿ ಯೋಗೇಶ್, ಕೋಟೆರ ಅಶೋಕ್ ಅವರುಗಳು ಚೆಕ್‍ಅನ್ನು ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಅರಮಣಮಾಡ ಸತೀಶ್ ಹಾಜರಿದ್ದರು.