ಕೂಡಿಗೆ, ನ. 13: ಕೂಡಿಗೆ ಮುಖ್ಯ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೋಮವಾರ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ ನಡೆಯಿತು. ಆರ್ಎಂಸಿ ಮಾಜಿ ಅಧ್ಯಕ್ಷರೂ, ಪಕ್ಷದ ಮುಖಂಡರು ಆದ ಎಂ.ಬಿ. ಜಯಂತ್, ಕೂಡಿಗೆ ಯುವ ಮೋರ್ಚಾದ ಬೊಮ್ಮಯ್ಯನ ಚಿಣ್ಣಪ್ಪ, ಪಕ್ಷದ ಪ್ರಮುಖರಾದ ಆರ್.ಕೆ.ಕೃಷ್ಣ, ಕೇಶವ ರೈ, ಕೃಷ್ಣ, ಜಗದೀಶ್, ಹೆಬ್ಬಾಲೆಯ ಉದ್ಯಮಿ ಚಂಗು ತಿಮ್ಮಪ್ಪ ಸೇರಿದಂತೆ ಪಕ್ಷದ ಮುಖಂಡರು ಇದ್ದರು.
ಶ್ರೀಮಂಗಲ :ಕೇಂದ್ರ ಸಚಿವ ಅನಂತ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಸಂತಾಪ ಸೂಚಿಸಿದೆ. ಸಂತಾಪ ಸಭೆಯಲ್ಲಿ ವಿ.ಹಿಂ.ಪ ಜಿಲ್ಲಾ ಅಧ್ಯಕ್ಷ ಎಂ.ಎಂ. ಬೋಪಯ್ಯ, ಕಾರ್ಯಾಧ್ಯಕ್ಷ ಐ.ಎಂ. ಅಪ್ಪಯ್ಯ ಪ್ರಮುಖರಾದ ಡಿ. ನರಸಿಂಹ, ಕುಶಾಲಪ್ಪ ಭಜರಂಗದಳದ ಜಿಲ್ಲಾ ಸಂಚಾಲಕ ಚೇತನ್, ವಿನಯ್, ಮನು, ರಾಜೀವ್ ಹಾಜರಿದ್ದರು.
* ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನಲೆ ಸಂತಾಪ ಸೂಚಿಸಿ ಶ್ರೀಮಂಗಲ ಪಟ್ಟಣವನ್ನು ಬಂದ್ ಮಾಡಲಾಯಿತು. ಮದ್ಯಾಹ್ನ 1 ರಿಂದ 2 ಗಂಟೆವರೆಗೆ ಶ್ರೀಮಂಗಲ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಾಳಿಮಾಡ ತಮ್ಮ ಮುತ್ತಣ್ಣ ನೇತೃತ್ವದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಚೆಟ್ಟಳ್ಳಿ : ಅನಂತ ಕುಮಾರ್ ನಿಧನಕ್ಕೆ ಬಿಜೆಪಿ ಸ್ಥಾನೀಯ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಚೆಟ್ಟಳ್ಳಿ ನರೇಂದ್ರ ಮೋದಿ ಭವನದಲ್ಲಿ ನಡೆಯಿತು. ತಾಲೂಕು ಪಂಚಾಯಿತಿ ಸದಸ್ಯ, ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಿಜೆಪಿ ಸ್ಥಾನೀಯ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ, ಉಪಾಧ್ಯಕ್ಷ ರವಿ ಎನ್.ಎಸ್., ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮಧುಕುಮಾರ್, ಮಾಜಿ ಬಿಜೆಪಿ ಸ್ಥಾನೀಯ ಅಧ್ಯಕ್ಷ ಮುಳ್ಳಂಡ ಕಾಶಿದೇವಯ್ಯ, ಪಂಚಾಯಿತಿ ಸದಸ್ಯರಾದ ಮೇರಿ ಅಂಬುದಾಸ್, ಮಾಲಾಶ್ರೀ, ದೇವಯಾನಿ, ಧನು ದೇವಯ್ಯ, ಬಿಜೆಪಿ ವಾರ್ಡ್ ಅಧ್ಯಕ್ಷ ಮಾಯಾಕೃಷ್ಣ, ಅರುಣ ಮತ್ತಿತರರು ಭಾಗವಹಿಸಿದ್ದರು.