ಮಡಿಕೇರಿ, ನ. 12: ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‍ನ 2018-19ನೇ ಸಾಲಿನ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎಂ.ಬಿ. ಗಣಪತಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಿರಿಶ್ ವಿಜಯೇಂದ್ರ ಆಯ್ಕೆಯಾಗಿದ್ದು, ನಿರ್ದೇಶಕರುಗಳಾಗಿ ಎಂ. ಅರವಿಂದ್‍ರಾವ್, ಮಹೇಶ್ ಶಶಿಧರ್, ಯಶವಂತ್ ಆರ್. ಗುರ್ಜರ್, ಎನ್. ರಾಮನಾಥನ್, ವಹೀದ್ ನಕ್ವಿ, ನಿರದ್ ಮುತ್ತಣ್ಣ, ಎಸ್. ಅಪ್ಪುದುರೈ, ಸಲ್ಮಾನ್ ಬಶೀರ್, ಖಾಲಿದ್ ಸಲೀಂ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ 60ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.