ವರದಿ-ಚಂದ್ರಮೋಹನ್ ಕುಶಾಲನಗರ, ನ. 12: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ದಿನಗಳೆದಂತೆ ನೂತನ ಬಡಾವಣೆಗಳು ತಲೆ ಎತ್ತುವದ ರೊಂದಿಗೆ ರಿಯಲ್ ಎಸ್ಟೇಟ್ ದಂಧೆ ಜನರ ಜೀವನದೊಂದಿಗೆ ಚೆಲ್ಲಾಟ ವಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಪಟ್ಟಣದಲ್ಲಿ ಸುಮಾರು 36 ಕ್ಕಿಂತಲೂ ಅಧಿಕ ಬಡಾವಣೆಗಳು ತಲೆ ಎತ್ತಿದ್ದು ಬಹುತೇಕ ಬಡಾವಣೆಗಳು ನಿಯಮಬಾಹಿರವಾಗಿ ನಿರ್ಮಾಣ ಗೊಂಡಿರುವದು ಇತ್ತೀಚಿನ ಬೆಳವಣಿಗೆಯಾಗಿದೆ.

ಸರಕಾರದ ಯಾವದೇ ನೀತಿ ನಿಯಮಗಳನ್ನು ಪಾಲಿಸದೆ ಕೇವಲ ಹಣ ಮಾಡುವ ಉದ್ದೇಶದಿಂದ ಕೆಲವು ಬಡಾವಣೆಗಳು ರೂಪುಗೊಂಡಿದ್ದು ನಿವೇಶನ ಖರೀದಿಸಿದ ನಾಗರಿಕರು ತ್ರಿಶಂಕು ಸ್ಥಿತಿ ಎದುರಿಸುತ್ತಿರುವದು ಗೋಚರಿಸಿದೆ. ಕೆಲವು ಬಡಾವಣೆಗಳಿಗೆ ಸಾರ್ವಜನಿಕ ಉಪಯೋಗಕ್ಕೋಸ್ಕರ ಮೀಸಲಿರಿಸಿರುವ ಜಾಗಗಳು ಮಾಯವಾಗುತ್ತಿವೆ. ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆಯಾಗುವ ದರೊಂದಿಗೆ ರಾಜ್ಯಪಾಲರ ಹೆಸರಿನಲ್ಲಿ ನೋಂದಾವಣೆ ಗೊಂಡಿರುವ ಕೋಟ್ಯಾಂತರ ಬೆಲೆಬಾಳುವ ಭೂಮಿ ಮಾರಾಟಕ್ಕೆ ಒಳಗಾಗಿವೆ.ಕುಶಾಲನಗರದ ಕೆಲವು ಬಡಾವಣೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಮೀಸಲಿರಿಸಿದ ಉದ್ಯಾನವನ, ಸಿಎ ನಿವೇಶನಗಳು ಬಹುತೇಕ ಖಾಸಗಿಯವರ ಸ್ವತ್ತಾಗಿ ಪರಿವರ್ತನೆಗೊಂಡರೂ ಯಾವದೇ ಅಧಿಕಾರಿಗಳು ಚಕಾರವೆತ್ತದೆ ಮೌನವಹಿಸಿರುವದು ಸಂಶಯಕ್ಕೆ ಎಡೆಮಾಡಿದೆ. ಕುಶಾಲನಗರ ಪಟ್ಟಣದ ಗುಂಡುರಾವ್ ಬಡಾವಣೆ, ಹೌಸಿಂಗ್ ಬೋರ್ಡ್ ಬಡಾವಣೆಗಳ ಮಧ್ಯ ಭಾಗದಲ್ಲಿ ಖಾಸಗಿ ಮಾಲೀಕತ್ವದ ಬಡಾವಣೆಗಳು ತಲೆ ಎತ್ತುವದ ರೊಂದಿಗೆ ಬಹುತೇಕ ನಿಯಮಾವಳಿ ಗಳನ್ನು ಗಾಳಿಗೆ ತೂರಿದ್ದು ಕಾಣ ಬಹುದು. ಇಲ್ಲಿನ ಆರ್‍ಕೆ ಲೇಔಟ್‍ನಲ್ಲಿ ಅಂದಾಜು 20 ಕ್ಕೂ ಅಧಿಕ ಮನೆಗಳು ನಿರ್ಮಾಣಗೊಂಡಿದ್ದು ಈ ಮನೆಗಳಿಗೆ ಕಳೆದ 4 ವರ್ಷಗಳಿಂದ ಶಾಶ್ವತ ವಿದ್ಯುತ್ ಸಂಪರ್ಕ

(ಮೊದಲ ಪುಟದಿಂದ) ಒದಗಿಸದೆ ತಾತ್ಕಾಲಿಕ ವಿದ್ಯುತ್ ಕಲ್ಪಿಸಲಾಗಿ ರುವದು ಖಚಿತಗೊಂಡಿದೆ. ಈ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿ ಇಂಜಿನಿಯರ್ ನೆಲೆಸಿದ್ದಾರೆ, ಗ್ರಾಮ ಪಂಚಾಯಿತಿ ಯೊಂದರ ಅಭಿವೃದ್ಧಿ ಅಧಿಕಾರಿ ಯೊಬ್ಬರ ಮನೆ ನಿರ್ಮಾಣಗೊಂಡಿದೆ, ಜಿಲ್ಲಾ ಪಂಚಾಯಿತಿ ನೌಕರನೊಬ್ಬ ಕಳೆದ 1 ವರ್ಷದಿಂದ ವಾಸ ಮಾಡುತ್ತಿದ್ದಾರೆ. ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಬಡಾವಣೆಯಲ್ಲಿ ವಾಸವಾಗಿದ್ದರೂ ಇಲ್ಲಿ ಸರಕಾರದ ನಿಯಮಗಳನ್ನು ಉಲ್ಲಂಘಿಸಲಾಗಿದೆ.

ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಿದ ಹಿನೆÀ್ನಲೆಯಲ್ಲಿ ತಾನು ಪ್ರತಿ ತಿಂಗಳು ಸಾವಿರ ರೂ.ಗಳಿಗೂ ಅಧಿಕ ವಿದ್ಯುತ್ ಬಿಲ್ ಪಾವತಿಸುವ ಪರಿಸ್ಥಿತಿ ಒದಗಿದೆ. ಈ ಬಗ್ಗೆ ವಿದ್ಯುತ್ ಇಲಾಖೆಯಾಗಲಿ ಬಡಾವಣೆ ಮಾಲೀಕರಾಗಲಿ ಯಾವದೇ ರೀತಿಯ ಸಹಾಯಕ್ಕೆ ಬರುತ್ತಿಲ್ಲ ಎನ್ನುತ್ತಾರೆ. ಜಿಲ್ಲಾ ಪಂಚಾಯತ್‍ನಲ್ಲಿ ನೌಕರನಾಗಿ ರುವ ರಾಮರಾವ್. ಕಳೆದ 4 ವರ್ಷಗಳಿಂದ ಈ ಬಡಾವಣೆ ಯಲ್ಲಿರುವ ಖಾಸಗಿ ಸಂಸ್ಥೆ ಉದ್ಯೋಗಿ ವಸಂತ್ ಪ್ರಕಾರ ಕಳೆದ ಹಲವು ವರ್ಷಗಳಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಬಳಸುವದ ರೊಂದಿಗೆ ಸಾವಿರಾರು ರೂಪಾಯಿ ಬಿಲ್ ಪಾವತಿ ಮಾಡುವದರೊಂದಿಗೆ ಅನಾನುಕೂಲ ಉಂಟಾಗಿದೆ ಎಂದಿದ್ದಾರೆ. ಈ ಬಡಾವಣೆಯಲ್ಲಿ ಬೀದಿ ದೀಪಗಳೇ ಇಲ್ಲದೆ ಕಳ್ಳತನ ಪ್ರಕರಣಗಳು ಆಗಾಗ್ಗೆ ನಡೆಯುತ್ತಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಡಾವಣೆಯ ಸುತ್ತಮುತ್ತ ಖಾಲಿ ನಿವೇಶನಗಳು ಪೊದೆ ಸೇರಿ ಇಲ್ಲಿ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಪರಿವರ್ತನೆಗೊಂಡಿರುವ ದೃಶ್ಯವೂ ಕಾಣಬಹುದು. ಕೆಲವು ವಿದ್ಯಾರ್ಥಿಗಳು ಹಾಗೂ ಪಡ್ಡೆ ಹುಡುಗರ ತಂಡಗಳು ಇಲ್ಲಿ ದಿನನಿತ್ಯ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಸೇವಿಸಿ ದಿನಕಳೆಯಲು ಸೃಷ್ಠಿಸಿದ ಕೇಂದ್ರದಂತೆ ನಿರ್ಮಾಣಗೊಂಡ ಬಡಾವಣೆಯಂತೆ ಭಾಸವಾಗುತ್ತದೆ.

ಪಟ್ಟಣ ಪಂಚಾಯಿತಿ ನಿಯಮ ಗಳನ್ನು ಉಲ್ಲಂಘಿಸಿ ಬಡಾವಣೆ ನಿರ್ಮಾಣಗೊಂಡಿರುವದು ಸಮಸ್ಯೆಗೆ ಮೂಲ ಕಾರಣ ಎನ್ನುತ್ತಾರೆ ಪಟ್ಟಣ ಪಂಚಾಯಿತಿಯ ಹಿಂದಿನ ಮುಖ್ಯಾಧಿಕಾರಿಯಾದ ಎ.ಎಂ. ಶ್ರೀಧರ್. ವಿಷಯಕ್ಕೆ ಸಂಬಂಧಿಸಿದಂತೆ ಬಡಾವಣೆ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಾಗಿರುವ ಜಾಗದಲ್ಲಿ ಯಾವದೇ ಅಭಿವೃದ್ಧಿ ಕಾಣುತ್ತಿಲ್ಲ. ಚರಂಡಿಗಳು, ರಸ್ತೆಗಳು ಕೂಡ ಸಮರ್ಪಕವಾಗಿಲ್ಲ ಎನ್ನುವ ದೂರು ಕೇಳಿಬಂದಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಕೇವಲ 28 ದಿನಗಳಿಗೆ ಮಾತ್ರ ಸೀಮಿತವಾಗಿದ್ದು ಬಡಾವಣೆ ಮಾಲೀಕರು ಹಾಗೂ ವಿದ್ಯುತ್ ಸಂಪರ್ಕ ಕಾಮಗಾರಿ ನಡೆಸುವ ಗುತ್ತಿಗೆದಾರರ ನಡುವೆ ಉಂಟಾಗಿರುವ ಗೊಂದಲ ಶಾಶ್ವತ ಸಂಪರ್ಕ ಕಲ್ಪಿಸಲು ತಾಂತ್ರಿಕ ತೊಂದರೆ ಉಂಟಾಗಿರುವದಾಗಿ ಸೆಸ್ಕ್ ಅಧಿಕಾರಿ ವಿನಯ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಮಾಸಿಕ ಕನಿಷ್ಟ ಶುಲ್ಕ ರೂ. 720 ಪಾವತಿಸಬೇಕಾಗುತ್ತದೆ. ಪ್ರಸಕ್ತ ಸಮರ್ಪಕ ದಾಖಲಾತಿಗಳನ್ನು ನೀಡುವ ಮೂಲಕ ಮನೆ ಮಾಲೀಕರು ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಿದೆ ಎಂದಿದ್ದಾರೆ. ಇನ್ನುಳಿದಂತೆ ಕೂಗಳತೆ ದೂರದಲ್ಲಿ ಕುಡಿವ ನೀರು ಸರಬರಾಜು ಮಂಡಳಿ ಕಚೇರಿ ಯಿದ್ದರೂ ಇವರಿಗೆ ಕುಡಿವ ನೀರಿಗೆ ಕೊಳವೆ ಬಾವಿಯನ್ನೇ ಆಶ್ರಯಿಸ ಬೇಕಾಗಿರುವದು ದುರಂತ ಎನ್ನಬಹುದು.

ಒಳಚರಂಡಿ ಯೋಜನೆಯ ಕಾಮಗಾರಿ ಕೂಡ ಇಲ್ಲಿ ಪ್ರಾರಂಭ ಗೊಂಡಿಲ್ಲ ಎನ್ನುವದು ಸ್ಥಳೀಯ ನಿವಾಸಿಗಳ ದೂರಾಗಿದೆ. ಇದೇ ರೀತಿ ಮಾದಾಪಟ್ಟಣ, ಬೈಚನಹಳ್ಳಿ ಸುತ್ತಮುತ್ತ ಹಲವು ಬಡಾವಣೆಗಳು ಸರಕಾರದ ನೀತಿ ನಿಯಮಗಳನ್ನು ಉಲ್ಲಂಘಿಸುವ ದರೊಂದಿಗೆ ನಾಗರಿಕರ ಹಣ ದೊಂದಿಗೆ ಚೆಲ್ಲಾಟವಾಡುತ್ತಿರುವ ಹಲವು ನಿದರ್ಶನಗಳನ್ನು ಕಾಣಬಹುದು.

ಕುಶಾಲನಗರ ಪಟ್ಟಣದಲ್ಲಿ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ರಚನೆಗೊಂಡು ಹಲವು ವರ್ಷಗಳು ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲವು ಬಡಾವಣೆಗಳು ಮಾತ್ರ ಯಾವದೇ ನಿಯಮಗಳನ್ನು ಪಾಲಿಸದೆ ನಿರ್ಮಾಣಗೊಳ್ಳುತ್ತಿರುವದು ನಿರಂತರವಾಗಿ ಮುಂದುವರೆದಿದೆ. ಕೆಲವು ಬಡಾವಣೆಗಳಲ್ಲಿ ಭಾರೀ ಸಾಮಥ್ರ್ಯದ ವಿದ್ಯುತ್ ಲೈನ್‍ಗಳು ಹಾದು ಹೋಗುತ್ತಿದ್ದರೂ ಇಂತಹ ಅಪಾಯಕಾರಿ ಬಡಾವಣೆಗಳಿಗೆ ಅನುಮತಿ ಕಲ್ಪಿಸಿರುವದು ಸರಿಯಲ್ಲ ಎಂದು ಮಾಜಿ ಜಿಪಂ ಸದಸ್ಯ ಹೆಚ್.ಎಸ್. ಅಶೋಕ್ ‘ಶಕ್ತಿ’ ಯೊಂದಿಗೆ ಮಾಹಿತಿ ನೀಡಿದ್ದು ಕುಡಾ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಭಾರೀ ಅನಾಹುತ ಸೃಷ್ಟಿಸಲಿದೆ ಎಂದಿದ್ದಾರೆ.

ಪಟ್ಟಣ ಪಂಚಾಯಿತಿ ನಿಯಮ ಗಳನ್ನು ಉಲ್ಲಂಘಿಸು ವದರೊಂದಿಗೆ ಬಡಾವಣೆಯಲ್ಲಿರುವ ಶೇ.100 ರಷ್ಟು ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಬಡಾವಣೆ ಮಾಲೀಕರು ನಾಟ್ ರೀಚೆಬಲ್ ಆಗುವದರೊಂದಿಗೆ ಮನೆ ಮಾಲೀಕರ ಸಂಪರ್ಕಕ್ಕೆ ದೊರಕದಿರುವದು ಇತ್ತೀಚಿನ ಬೆಳವಣಿಗೆಯಾಗಿದ್ದು, ಎಲ್ಲಾ ಅವ್ಯವಸ್ಥೆಗಳಿಗೆ ಮೂಲ ಕಾರಣ ಎಂದು ಬಡಾವಣೆ ನಿವಾಸಿಗಳು ಶಕ್ತಿಗೆ ತಮ್ಮ ರೋದನವನ್ನು ತೋಡಿ ಕೊಂಡಿದ್ದಾರೆ.