ಮಡಿಕೇರಿ, ನ. 11: ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ಹಿನ್ನಲೆಯಲ್ಲಿ ಸಂತ್ರಸ್ತರಾದವರಿಗೆ ನೆರವು ನೀಡುವ ನಿಟ್ಟಿನಲ್ಲಿ ಕುಂಬಳದಾಳುವಿನ ನವಚೇತನ ಯುವಕ ಸಂಘದಿಂದ ಆರ್ಥಿಕ ಸಹಾಯ ನೀಡಲಾಯಿತು.

ರೂ. 10 ಸಾವಿರ ಮೊತ್ತದ ಡಿ.ಡಿ.ಯನ್ನು ಸಂಘದ ಅಧ್ಯಕ್ಷ ಕೆ.ಎಂ. ಭೀಮರಾಜ್, ಕಾರ್ಯದರ್ಶಿ ಡಿ.ಬಿ. ರಾಜೇಶ್, ನಿರ್ದೇಶಕರಾದ ಟಿ.ಎಸ್. ಪೂರ್ಣೇಶ್, ಕೆ.ಸಿ. ಜಯಪ್ರಕಾಶ್, ಶಿವಪ್ರಕಾಶ್, ಬೋಪಣ್ಣ ಅವರುಗಳು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಹಸ್ತಾಂತರಿಸಿದರು.