ಮಡಿಕೇರಿ, ನ. 11: ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಹೆಚ್.ಎನ್. ಅಜಿತ್‍ಕುಮಾರ್ ಹಾಗೂ ಹೆಚ್. ಆರ್. ವಿನು 2018-19ನೇ ಸಾಲಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕಾಲ್ಚೆಂಡು ಪಂದ್ಯಾಟದಲ್ಲಿ ಉತ್ತಮ ಸಾಧನೆಯನ್ನು ತೋರಿ, ತಾ. 12 ರಿಂದ ರಾಜಸ್ತಾನದಲ್ಲಿ ಪ್ರಾರಂಭವಾಗುವ ರಾಷ್ಟ್ರಮಟ್ಟದ ಕಾಲ್ಚೆಂಡು ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಹಪಾಠಿ ವಿದ್ಯಾರ್ಥಿಗಳು ಆರ್ಥಿಕ ನೆರವನ್ನು ನೀಡಿ ಶುಭಕೋರಿದರು.