ಮಡಿಕೇರಿ, ನ. 11: ಕೊಡಗಿನ ಜಲ ಪ್ರಳಯದ ಕಾರಣ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಂದರೆಯಾಗಬಾರದೆಂದು ವಿದ್ಯಾರ್ಥಿಗಳಿಗೆ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಶಾಲಾ ಬ್ಯಾಗ್‍ಗಳನ್ನು ವಿತರಿಸಿದ್ದಾರೆ.

ಕಾವೇರಿ ಗ್ರಾಮೀಣ ಬ್ಯಾಂಕ್ ಮೇಕೇರಿ ಶಾಲೆ ಉದ್ಯೋಗಿ ಮತ್ತು ಟಿ.ವಿ. ಲೋಕೇಶ್ ತಮ್ಮ ತಾಯಿಯ ಜ್ಞಾಪಕಾರ್ಥವಾಗಿ ರೂ. 10 ಸಾವಿರ ದತ್ತಿ ನಿಧಿಯನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮೇಕೇರಿಗೆ ನೀಡಿದ್ದಾರೆ.