ಗೋಣಿಕೊಪ್ಪ ವರದಿ, ನ. 10: ತಿತಿಮತಿ ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪಾನ್ಸ್ ಟೀಂ ವತಿಯಿಂದ ಹೆದ್ದಾರಿ ಬದಿಗಳಲ್ಲಿ ಕಸ ಹೆಕ್ಕುವ ಮೂಲಕ ಸ್ವಚ್ಛ ಭಾರತ ಕಾರ್ಯಕ್ರಮ ನಡೆಸಲಾಯಿತು.
ತಿತಿಮತಿಯಿಂದ ಆನೆಚೌಕೂರು ಗೇಟ್ವರೆಗೆ ಸುಮಾರು 5 ಕಿ.ಮೀ. ದೂರದವರೆಗೆ ರಸ್ತೆ ಬದಿಗಳಲ್ಲಿ ಪ್ರವಾಸಿಗರು ಹಾಕಿದ್ದ ಕಸ, ಕುಪ್ಪಿ, ಪ್ಲಾಸ್ಟಿಕ್ ಚೀಲ ಇವುಗಳನ್ನು ತಿತಿಮತಿ ಆರ್ಆರ್ಟಿ ತಂಡದ ನಾಯಕ ಸಂಜು ಸಂತೋಷ್ ಮುಂದಾಳತ್ವದಲ್ಲಿ ಸ್ವಚ್ಛಗೊಳಿಸಲಾಯಿತು.