ಮಡಿಕೇರಿ, ನ. 9: ಪ್ರಾಕೃತಿಕ ವಿಕೋಪದಿಂದಾಗಿ ಮನೆ, ತೋಟ ಕಳೆದುಕೊಂಡು ನಷ್ಟಕ್ಕೊಳಗಾದ ಸಂತ್ರಸ್ತರಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಗೌಡ ಜನಾಂಗದವರ ಸ್ನೇಹ ಜನಕೂಟ ಬಳಗದ ವತಿಯಿಂದ ನೆರವು ನೀಡಲಾಯಿತು.
ಬೆಂಗಳೂರಿನಲ್ಲಿ ನೆಲೆಸಿರುವ ಗೌಡ ಜನಾಂಗ ಬಾಂಧವರು ರಚಿಸಿಕೊಂಡಿರುವ ಸ್ನೇಹಜನಕೂಟದ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ನೆರವಿನ ಹಣವನ್ನು ವಿಕೋಪಕ್ಕೆ ತುತ್ತಾದ ಮಕ್ಕಂದೂರು, ಹೆಮ್ಮೆತ್ತಾಳು, ಮುಕ್ಕೋಡ್ಲು, ಮದೆ ವ್ಯಾಪ್ತಿಯ ಆಯ್ದ ಸಂತ್ರಸ್ತ ಗೌಡ ಕುಟುಂಬಗಳಿಗೆ ವಿತರಿಸಲಾಯಿತು.
ಕೂಟದ ಅಧ್ಯಕ್ಷ ಸಿರಕಜೆ ಕಾವೇರಿಯಪ್ಪ, ಕೋಟೇರ ಹರೀಶ್ ನೇತೃತ್ವದಲ್ಲಿ ಕೂಟದ ಸದಸ್ಯರು ಮಡಿಕೇರಿಗೆ ಆಗಮಿಸಿ ನೆರವು ಹಸ್ತಾಂತರಿಸಿದರು. ಈ ಕೂಟದ ವತಿಯಿಂದ ಇದು ಎರಡನೇ ಬಾರಿಗೆ ನೆರವು ವಿತರಣೆ ನೀಡಲಾಗಿದೆ.