ಗೋಣಿಕೊಪ್ಪಲು. ನ. 9: ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೀರಂಡ ಕಂದಾ ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ ಆವರಣದಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಕೋಳೆರ ದಿನು, ನಿರ್ದೇಶಕರುಗಳಾಗಿ ಅಡ್ಡಂಡ ಜಾಲಿ ತಿಮ್ಮಯ್ಯ, ಆಲೇಮಾಡ ಪ್ರಸು ಮುತ್ತಪ್ಪ ಮುದ್ದಿಯಡ ಬೋಸು ಸೋಮಯ್ಯ, ಮಂಜುವಂಡ ಬೆಳ್ಳಿಯಪ್ಪಮಯ್ಯ (ಅರುಣ) ಆಲೀರ ಅಬ್ದುಲ್ ಅಜೀಜ್, ಮೂಕಳೇರ ಸರಸ್ಪತಿ, ಕೋಲತಂಡ ಸುವಿನ್, ಕಾಕೇರ ತಾರಾ ರವಿ, ಹೆಚ್. ವಿಠಲ ಹಾಗೂ ಕೋಟೇರ ಉತ್ತಪ್ಪ ಆಯ್ಕೆಗೊಂಡಿದ್ದಾರೆ.