ಮಡಿಕೇರಿ, ನ. 7: ಇದೇ 2019ರ ಜನವರಿ ಒಂದು ಅರ್ಹತಾ ದಿನಾಂಕ ವಾಗಿ ನಿಗದಿಗೊಳಿಸಿ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಪ್ರಕ್ರಿಯೆಯು ಆರಂಭವಾಗಿದ್ದು, ತಾ. 20ರೊಳಗೆ ಬೂತ್ ಮಟ್ಟದ ಅಧಿಕಾರಿಗಳು 18 ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ರಾಗುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರ ಪಟ್ಟಿಯ ನಮೂನೆ 6ರಂತೆ 18 ವರ್ಷ ಪೂರ್ಣ ಗೊಂಡವರನ್ನು (2019, ಜನವರಿ 1ರಂತೆ) ಸೇರ್ಪಡೆ ಮಾಡುವದು, ನಮೂನೆ 7 ರಂತೆ ತೆಗೆಯುವದು, ನಮೂನೆ 8 ರಂತೆ ತಿದ್ದುಪಡಿ ಮಡಿಕೇರಿ, ನ. 7: ಇದೇ 2019ರ ಜನವರಿ ಒಂದು ಅರ್ಹತಾ ದಿನಾಂಕ ವಾಗಿ ನಿಗದಿಗೊಳಿಸಿ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಪ್ರಕ್ರಿಯೆಯು ಆರಂಭವಾಗಿದ್ದು, ತಾ. 20ರೊಳಗೆ ಬೂತ್ ಮಟ್ಟದ ಅಧಿಕಾರಿಗಳು 18 ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ರಾಗುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರ ಪಟ್ಟಿಯ ನಮೂನೆ 6ರಂತೆ 18 ವರ್ಷ ಪೂರ್ಣ ಗೊಂಡವರನ್ನು (2019, ಜನವರಿ 1ರಂತೆ) ಸೇರ್ಪಡೆ ಮಾಡುವದು, ನಮೂನೆ 7 ರಂತೆ ತೆಗೆಯುವದು, ನಮೂನೆ 8 ರಂತೆ ತಿದ್ದುಪಡಿ ಸೇರ್ಪಡೆಗೆ ವಿಶೇಷ ಶಿಬಿರ ಹಮ್ಮಿಕೊಳ್ಳುವಂತೆ ಅವರು ಸಲಹೆ ಮಾಡಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ನೋಂದಣಿ ಕಡಿಮೆಯಾಗಿದ್ದು, ಮಹಿಳಾ ಮತದಾರರನ್ನು ನೋಂದಣಿ ಮಾಡಲು ಕ್ರಮವಹಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಅನಿವಾಸಿ ಭಾರತೀಯ ಮತದಾರರ ಅರ್ಜಿಗಳನ್ನು ನಮೂನೆ-6ಎ ನಲ್ಲಿ ಪಡೆದು ವಿಶೇಷ ಕ್ರಮ ವಹಿಸುವಂತಾಗಬೇಕು. ಮತದಾರರ ಪಟ್ಟಿಯಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳ ಮತ್ತು ಇತರ ವಿಐಪಿಗಳ ಹೆಸರು ಇರುವ ಬಗ್ಗೆ ಪರಿಶೀಲಿಸಿ ಖಚಿತಪಡಿಸಿ ಕೊಳ್ಳುವದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

ಬೂತ್ ಮಟ್ಟದ ಏಜೆಂಟರು ಗಳು ನೀಡುವ ನಮೂನೆಗಳನ್ನು ಕಡ್ಡಾಯವಾಗಿ ಚುನಾವಣಾಧಿಕಾರಿ ಗಳು ಹಾಗೂ ಸಹಾಯಕ ಚುನಾವಣಾಧಿ ಕಾರಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳ ಬೇಕು. ತಾ. 20 ರೊಳಗೆ ಬೂತ್ ಮಟ್ಟದ ಅಧಿಕಾರಿಗಳು ಸ್ವೀಕರಿಸುವ ನಮೂನೆ-6, 7, 8 ಮತ್ತು 8ಎ ಯನ್ನು ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ನಿಯಮಾನುಸಾರ ಪರಿಶೀಲಿಸಿ ಡಿಸೆಂಬರ್ 20 ರೊಳಗೆ ಇಆರ್‍ಎಂಎಸ್ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡುವಂತೆ ಪ್ರವೀಣ್ ಕುಮಾರ್ ಸೂಚಿಸಿದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ವ್ಯವಸ್ಥಿತವಾಗಿ ಎಲ್ಲಾ ಹಂತದ ಅಧಿಕಾರಿಗಳು ನಿರ್ವಹಿಸಬೇಕು. ಮತದಾರರ ಪಟ್ಟಿ ಸೇರ್ಪಡೆ, ತೆಗೆದು ಹಾಕುವದು, ವರ್ಗಾವಣೆ ಮತ್ತಿತರ ಬಗ್ಗೆ ಯಾವುದೇ ದೂರುಗಳು ಕೇಳಿ ಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅವರು ಸೂಚಿಸಿದರು. ತಹಶೀಲ್ದಾರರಾದ ಕುಸುಮ, ಮಹೇಶ್, ಗೋವಿಂದ ರಾಜು, ಕಂದಾಯ ನಿರೀಕ್ಷಕರು, ಬಿಎಲ್‍ಒಗಳು ಇತರರು ಇದ್ದರು.