ಕೂಡಿಗೆ, ನ. 4: ನಿರ್ಮಿತಿ ಕೇಂದ್ರದ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಇನ್ನು ಆಗಬೇಕಾಗಿರುವ ರಸ್ತೆ ಕಾಮಗಾರಿ, ಒಳಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆಯು ಆದಷ್ಟು ಬೇಗನೆ ಮುಗಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾ ಗಿರಿಜನ ಸಮಗ್ರ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಪರಿಶಿಷ್ಟ ಪಂಗಡಕ್ಕೆ ಸೇರಿದ ಮಲ್ಲೇನಹಳ್ಳಿ ಗ್ರಾಮದ ಪದ್ಮ ಎಂಬವರ ತಾಯಿ ಪಾಶ್ರ್ವವಾಯು ರೋಗದಿಂದ ನರಳುತ್ತಿದ್ದು, ಇವರ ಮನೆಯು ಅತಿಯಾದ ಮಳೆಯಿಂದಾಗಿ ಬಿದ್ದಿರುವದನ್ನು ವೀಕ್ಷಿಸಿದ ಅವರು ವಸತಿ ನಿಗಮದ ವತಿಯಿಂದ ಮನೆಯನ್ನು ನಿರ್ಮಿಸಿ ಕೊಡುವಂತೆ ಸೂಚಿಸಿದರು. ಹಾಗೂ ತಮ್ಮ ದಾಖಲಾತಿಗಳನ್ನು ನೀಡುವಂತೆ ಪದ್ಮ ಅವರಿಗೂ ಸಹ ತಿಳಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಆರ್. ಮಂಜಳಾ, ಜಿಲ್ಲಾ ಗಿರಿಜನ ಸಮಗ್ರ ಅಭಿವೃದ್ಧಿ ಅಧಿಕಾರಿ ಶಿವಕುಮಾರ, ಸ್ಥಳೀಯ ಪ್ರಮುಖರಾದ ಬೊಮ್ಮಯ್ಯನ ಚಿಣ್ಣಪ್ಪ, ಧನರಾಜ (ಚಿಮ್ಮಿ) ಮೊದಲಾದವರು ಇದ್ದರು.