ಕುಶಾಲನಗರ, ನ. 5: ಸರಕಾರಿ ಬಸ್ ಪಾದಚಾರಿಗೆ ಡಿಕ್ಕಿಯಾಗಿ ಎರಡೂ ಕಾಲುಗಳಿಗೆ ತೀವ್ರ ಗಾಯಗೊಂಡ ಘಟನೆ ಕುಶಾಲನಗರ ಸಾರಿಗೆ ಬಸ್ ನಿಲ್ದಾಣದ ಬಳಿ ನಡೆದಿದೆ. ಮೂಲತಃ ಭಾಗಮಂಡಲದ ನಿವಾಸಿಯಾಗಿರುವ ಈಶ್ವರ್ (55) ಅಪಘಾತಕ್ಕೆ ಒಳಗಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ.
ಬೆಳಿಗ್ಗೆ ಮೈಸೂರು ಕಡೆಯಿಂದ ಕುಶಾಲನಗರ ಬಸ್ ನಿಲ್ದಾಣಕ್ಕೆ ಬಸ್ (ಕೆಎ.09.ಎಫ್ 5229) ಆಗಮಿಸಿದ್ದು ಈ ಸಂದರ್ಭ ಪಾದಚಾರಿಗೆ ಡಿಕ್ಕಿಯಾಗಿದೆ. ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಎರಡೂ ಕಾಲು ಟಯರ್‍ನಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ.
ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು. ಆಕ್ರೋಶÀಗೊಂಡ ಸ್ಥಳೀಯರು ಸಾರಿಗೆ ಬಸ್ ನಿರ್ವಾಹಕನಿಗೆ ಥಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಬಸ್ ಚಾಲಕ ವಾಲೇಕರ್ ಎಂಬಾತನನ್ನು ದಸ್ತಗಿರಿ ಮಾಡಿ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.