ಮಡಿಕೇರಿ: ತಾ. 10 ರ ಟಿಪ್ಪು ಜಯಂತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸೆ. 107 ರ ಅನ್ವಯ ಕಾನೂನು ಕ್ರಮಕ್ಕೆ ಮೂರು ತಾಲೂಕಿನ ತಹಶೀಲ್ದಾರ್‍ಗಳು ತಾಲೂಕು ದಂಡಾ ಧಿಕಾರಿಗಳಾಗಿ ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಇಲಾಖೆಯೂ ಇದಕ್ಕೆ ಕೈಜೋಡಿಸಿದೆ.

ಮಡಿಕೇರಿ ತಾಲೂಕಿನ 155 ಮಂದಿ ರೌಟಿ ಶೀಟರ್‍ಗಳನ್ನು ನೋಟೀಸ್ ಮೂಲಕ ಇಂದು ಮಡಿಕೇರಿ ತಾಲೂಕು ತಹಶೀಲ್ದಾರ್ ಕಚೇರಿಗೆ ಬರುವಂತೆ ನಿರ್ದೇಶಿಸಿದ್ದರು. 155 ಮಂದಿಯೂ ಇಂದು ನೋಟೀಸ್‍ನ ಮಾಹಿತಿಯಂತೆ ಪೂ. 11 ಗಂಟೆಗೆ ಕಚೇರಿಗೆ ಬಂದು ಕಾದು ಕುಳಿತಿದ್ದು ತಹಶೀಲ್ದಾರ್ ಕುಸುಮ ಅವರು ಜಿಲ್ಲಾ ಕಚೇರಿಯಲ್ಲ್ಲಿನ ಸಭೆಗೆ ತೆರಳಿ ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತ ಗೊಂಡಿತು. ಈ ಬಗ್ಗೆ ಹಾಜರಾಗಿದ್ದ ಆರೋಪಿತ (ಈ ಹಿಂದಿನ) ವ್ಯಕ್ತಿಗಳ ಪರ ವಕೀಲರಾದ ಕೃಷ್ಣಮೂರ್ತಿ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು. ರೌಡಿ ಶೀಟರ್‍ಗಳೆಂದು ಕರೆಸಲಾಗಿದೆ. ಅನೇಕರು ಕೇವಲ ಸಾಮಾಜಿಕ ಹೋರಾಟಗಾರರಾಗಿದ್ದು ಅಂತಹ ವರನ್ನೂ ಅಕ್ರಮಿಗಳ ಪಟ್ಟಿಯಲ್ಲಿ ಸೇರಿಸಿರುವದು ವಿಷಾದಕರ ಎಂದು ವಕೀಲರು ಅಭಿಪ್ರಾಯಪಟ್ಟರು. ಬಂದಿದ್ದವರ ಪೈಕಿ ಸುಮಾರು 50 ಮಂದಿ ತಲಾ ರೂ. 1 ಲಕ್ಷದ ಬಾಂಡ್ ನೀಡಬೇಕಾಯಿತು. ಟಿಪ್ಪು ಜಯಂತಿ ದಿನ ಗಲಭೆಗಳಾದರೆ ಅವರನ್ನು ಸೆ. 107 ರ ಅನ್ವಯ ಹೊಣೆಗಾರರಾಗಿ ಸುವದಕ್ಕಾಗಿ ತಾಲೂಕು ದಂಡಾಧಿಕಾರಿ ಈ ಬಾಂಡ್ ಪಡೆದಿದ್ದ್ದಾರೆ. ಆದರೆÀ, ಉಳಿದ ಮಂದಿಯನ್ನು ಹೊಣೆ ಗಾರ ರಾಗಿಸುವದಾದರೂ ವಕೀಲರ ಮೂಲಕ ಸಲ್ಲಿಸಿದ ಮನವಿಯಿಂದಾಗಿ ಈ ಮಂದಿಯಿಂದÀ ಬಾಂಡ್ ಪಡೆದುಕೊಳ್ಳಲಿಲ್ಲ.

ಮಡಿಕೇರಿ ನಗರ ಎಸ್.ಐ ಷಣ್ಮುಖಂ ಅವರ ಪ್ರಕಾರ ಮಡಿಕೇರಿ ನಗರದಲ್ಲಿ 16 ಮಂದಿಯಿಂದ ಬಾಂಡ್ ಪಡೆದುಕೊಳ್ಳಲಾಗಿದೆ. ವೀರಾಜಪೇಟೆ ಯಲ್ಲಿ ಸೆ. 107 ರ ಅನ್ವಯ 139 ಮಂದಿಯನ್ನು ಕರೆಸಿ ಹೇಳಿಕೆ ಪಡೆಯ ಲಾಗಿದೆ. ಮಂಗಳವಾರÀ ಮತ್ತ್ತಿನ್ನಷ್ಟು ಮಂದಿಯನ್ನು ಕರೆಸಲಾಗುತ್ತದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.

ಸೋಮವಾರಪೇಟೆ : ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಸೋಮ ವಾರಪೇಟೆಯಲ್ಲಿ

(ಮೊದಲ ಪುಟದಿಂದ) ಭಾರತೀಯ ದಂಡ ಸಂಹಿತೆ 107 ಅಡಿಯಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಿ, ರೂ. 10 ಸಾವಿರದ ಬಾಂಡ್ ಪಡೆದು, ಜಯಂತಿ ಆಚರಣೆ ಸಂದರ್ಭ ಶಾಂತಿ ಸಾಮರಸ್ಯ ಕಾಪಾಡಬೇಕೆಂದು ಎಚ್ಚರಿಕೆ ನೀಡಲಾಗಿದೆ. ಇಲ್ಲಿನ ತಾಲೂಕು ಕಚೇರಿಯಲ್ಲಿ, ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಯೂ ಆಗಿರುವ ಮಹೇಶ್ ಅವರು, ಸುಮಾರು 80ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಎಲ್ಲರಿಂದಲೂ ತಲಾ ರೂ. 10 ಸಾವಿರದ ಬಾಂಡ್ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿತರನ್ನು (ಈ ಹಿಂದಿನ) ತಾಲೂಕು ಕಚೇರಿಗೆ ಕರೆಸಿ ವಿಚಾರಣೆಗೆ ಒಳಪಡಿಸಲಾಯಿತು. ಟಿಪ್ಪು ಜಯಂತಿ ಹಿನ್ನೆಲೆ ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರಬಾರದು. ಕಾನೂನು ಸುವ್ಯವಸ್ಥೆಯ ವಿರುದ್ಧವಾಗಿ ನಡೆದುಕೊಂಡರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಲಾಯಿತಲ್ಲದೇ, ತಲಾ 10 ಸಾವಿರದ ಬಾಂಡ್ ಬರೆಸಿಕೊಳ್ಳಲಾಯಿತು.