ಗೋಣಿಕೊಪ್ಪಲು, ನ.5: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿದ್ದ ಸಂದರ್ಭ ಟಿಪ್ಪು ಜಯಂತಿ ಆಚರಣೆ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಮುಖ್ಯಮಂತ್ರಿ ಆಗಿರುವ ಅವರಿಗೆ ಟಿಪ್ಪುಜಯಂತಿಯನ್ನು ರದ್ದುಪಡಿಸಲು ಅವಕಾಶವಿದೆ. ಇದೀಗ ಮೌನವಾಗಿರುವ ಅವರು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ವೀರಾಜಪೇಟೆ ವಿಧಾನಸಭಾ ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದರಲ್ಲದೆ, ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ನಿಷೇಧಿಸುವಂತೆ ಆಗ್ರಹಿಸಿದರು.ಪೆÇನ್ನಂಪೇಟೆ ಶಾಸಕರ ಕಚೇರಿಯಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು ಅಧಿಕಾರ ಇಲ್ಲದಿದ್ದಾಗ ಒಂದು ಮಾತು, ಅಧಿಕಾರ ಇರುವಾಗ ಮೌನ ತಾಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೀಗ ತಮ್ಮ ನಿರ್ಧಾರ ಪ್ರಕಟಿಸುವದರೊಂದಿಗೆ, ಕಳೆದ ಮೂರು ವರ್ಷದ ಟಿಪ್ಪು ಜಯಂತಿ ಆಚರಣೆ ರಾಜ್ಯದ

(ಮೊದಲ ಪುಟದಿಂದ) ಜನತೆಗೆ ಯಾವ ಸಂದೇಶ ರವಾನೆ ಮಾಡಿದೆ ಎಂಬದರ ಬಗ್ಗೆ ಅವಲೋಕನ ಮಾಡಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು ಇದೀಗ ಟಿಪ್ಪು ಜಯಂತಿ ವಿರೋಧಿಸುವವರಿಗೆ ಬೆದರಿಕೆ ಹಾಕುವ ಮಾದರಿಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.ಇವರ ಬೆದರಿಕೆಗೆ ಯಾರೂ ಮಣಿಯಲ್ಲ. ಟಿಪ್ಪು ಜಯಂತಿ ಆಚರಣೆಗೂ ಮುನ್ನ ಕೊಡಗಿನಲ್ಲಿ ಯಾವದೇ ಕೋಮು ಸಂಘರ್ಷ ಇರಲಿಲ್ಲ ಎಂದರು.

ಇಸ್ಲಾಂ ಧರ್ಮದಲ್ಲಿ ಯಾವದೇ ಜಯಂತಿ ಆಚರಣೆ ಮಾಡುವಂತಿಲ್ಲ. ಆದರೆ, ಸರ್ಕಾರವೇ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದ ನಂತರ ಇಲ್ಲಿ ಎಲ್ಲ ಧರ್ಮೀಯರ ನಡುವಿನ ಸಹೋದರತ್ವಕ್ಕೆ ಧಕ್ಕೆ ಒದಗಿದೆ. ಕ್ರೈಸ್ತ ಜನಾಂಗಕ್ಕೂ ಟಿಪ್ಪು ಜಯಂತಿ ಅಗತ್ಯವಿಲ್ಲ. ಈ ಹಿಂದೆ ಟಿಪ್ಪು ಸುಲ್ತಾನ್ ಅವಧಿಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯವನ್ನೂ ಭಗ್ನಗೊಳಿಸಲು ಟಿಪ್ಪು ಯತ್ನಿಸಿದ್ದ. ಮಂಗಳೂರು ಹಾಗೂ ಕೇರಳದಲ್ಲಿಯೂ ಟಿಪ್ಪು ಜಯಂತಿ ಅಚರಣೆಗೆ ಕ್ರೈಸ್ತ ಧರ್ಮೀಯರ ವಿರೋಧವಿದೆ ಎಂದು ಹೇಳಿದರು.

ಟಿಪ್ಪು ಕೊಡಗಿನಲ್ಲಿಯೂ ಸುಮಾರು 310 ದೇಗುಲಗಳನ್ನು ಭಗ್ನಗೊಳಿಸಿದ್ದು, ಭಗಂಡೇಶ್ವರ ಸಾನ್ನಿಧ್ಯದಲ್ಲಿ ಆನೆಯ ವಿಗ್ರಹದ ಸೊಂಡಿಲನ್ನು ಕಡಿದು ವಿರೂಪಗೊಳಿಸಲಾಗಿದೆ. ತಲಕಾವೇರಿ ಯಲ್ಲಿಯೂ ಅಟ್ಟಹಾಸವನ್ನು ಮೆರೆಯಲು ಟಿಪ್ಪು ಪ್ರಯತ್ನಿಸಿದ ಸಂದರ್ಭ ಮಳೆ ಹಾಗೂ ಮಂಜುವಿನಿಂದಾಗಿ ವಾಪಸ್ಸಾಗಿರು ವದ್ದಕ್ಕೆ ಇತಿಹಾಸದಲ್ಲಿ ಉಲ್ಲೇಖವಿದೆ. ಇದೇ ಸಂದರ್ಭ ತಣ್ಣಿಮಾನಿಯಲ್ಲಿ ‘ಸಲಾಂ ಕಲ್ಲು’ ಪುರಾವೆ ಒದಗಿಸಿದೆ. ದಕ್ಷಿಣ ಕೊಡಗಿನಲ್ಲಿಯೂ ಟಿಪ್ಪು ಸುಲ್ತಾನ್ ಹಲವು ದೇವಸ್ಥಾನಗಳನ್ನು ಭಗ್ನಗೊಳಿಸಿದ ಬಗ್ಗೆ ಪುರಾವೆ ಇದೆ. ಕೊಡಗಿನ ಹಲವು ಮೂಲನಿವಾಸಿಗಳನ್ನು ಶ್ರೀರಂಗಪಟ್ಟಣಕ್ಕೆ ಕರೆದೊಯ್ದ ಟಿಪ್ಪು ಮತಾಂತರ ಗೊಳಿಸಿದ್ದನು. ವಿರೋಧಿಸಿದವರನ್ನು ಅಮಾನುಷ ಹತ್ಯೆ ಮಾಡಿರುವದೂ ಇತಿಹಾಸದಲ್ಲಿ ದಾಖಲಾಗಿದೆ ಎಂದು ವಿವರಿಸಿದರು.

ವಾಲ್ಮೀಕಿ, ಕನಕದಾಸ ಹಾಗೂ ಬಸವಜಯಂತಿ ಆಚರಣೆಗೆ ಹಿನ್ನೆಲೆ ಇದೆ. ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಯಾವ ಉದ್ದೇಶವಿದೆ ಎಂದು ಸರ್ಕಾರ ಸ್ಪಷ್ಟಪಡಿಸಲಿ ಎಂದು ಶಾಸಕ ಬೋಪಯ್ಯ ಆಗ್ರಹಿಸಿದರು.

ಕುಶಾಲನಗರ ಡಿವೈಎಸ್‍ಪಿ ಟಿಪ್ಪುಸುಲ್ತಾನ್ ಜಯಂತಿ ಬಗ್ಗೆ ಶಾಂತಿ ಸಭೆ ನಡೆಸಿ ಪ್ರಚೋದನಾ ಹೇಳಿಕೆ ನೀಡಲು ಅಧಿಕಾರ ನೀಡಿದವರು ಯಾರು? ವೀರಾಜಪೇಟೆ ತಹಶೀಲ್ದಾರ್ ಅವರು ಟಿಪ್ಪು ಜಯಂತಿ ಆಚರಣೆಗೂ ಮುನ್ನ ಸುಮಾರು 100ಕ್ಕೂ ಅಧಿಕ ಮಂದಿ ವಿರುದ್ಧ 107 ಸೆಕ್ಷನ್ ಪ್ರಕಾರ ಕೇಸು ದಾಖಲು ಮಾಡಿದ್ದು, ಪ್ರಚೋದನೆಗೆ ಕಾರಣವಾಗಿದೆ. ಜಿಲ್ಲೆಯ ಎಲ್ಲೆಡೆ ಟಿಪ್ಪು ಜಯಂತಿ ನೆಪದಲ್ಲಿ ಅಶಾಂತಿ ಕದಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದ ಅವರು ಟಿಪ್ಪು ಜಯಂತಿಯಿಂದಾಗಿ ಕೊಡಗಿನಲ್ಲಿ ಎರಡು ಜೀವಹಾನಿ ಪ್ರಕರಣ ದಾಖಲಾಗಿದೆ. ಇದರಿಂದ ರಾಜ್ಯದ ಜನತೆಗೆ ಯಾವ ಉತ್ತಮ ಸಂದೇಶವೂ ರವಾನೆಯಾಗುವದಿಲ್ಲ. ರಾಜ್ಯಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವ ಮೂಲಕ ಕೊಡಗಿನಲ್ಲಿಯೂ ಶಾಂತಿ ಸ್ಥಾಪನೆಗೆ ಮುಂದಾಗಬೇಕು ಎಂದು ಶಾಸಕ ಬೋಪಯ್ಯ ಮನವಿ ಮಾಡಿದರು.

ಈ ಸಂದರ್ಭ ಬಿಜೆಪಿ ಪ್ರಮುಖರಾದ ಕೆ.ಬಿ.ಗಿರೀಶ್‍ಗಣಪತಿ, ತಾ.ಪಂ.ಸದಸ್ಯ ಕುಟ್ಟಂಡ ಅಜಿತ್‍ಕರುಂಬಯ್ಯ, ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಅರುಣ್‍ಭೀಮಯ್ಯ, ಕಾನೂರಿನ ಕಾಡ್ಯಮಾಡ ಭರತ್, ಪೆÇನ್ನಂಪೇಟೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ತೋರಿರ ವಿನು, ಪುಳ್ಳಂಗಡ ನಟೇಶ್, ಶಾಸಕರ ಆಪ್ತರಾದ ಮಲ್ಲಂಡ ಮಧು ದೇವಯ್ಯ, ಅಮ್ಮತ್ತೀರ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

- ಟಿ.ಎಲ್.ಶ್ರೀನಿವಾಸ್