ಮಡಿಕೇರಿ, ಅ. 25: ಹೆಮ್ಮೆತ್ತಾಳು ನಿವಾಸಿ, ಅಯ್ಯಕುಟ್ಟಿರ ರಂಜಿತ್ ಮಾಚಯ್ಯ ಸಾವಿನ ಪ್ರಕರಣ ಸಂಬಂಧ ಆತನ ಸೋದರ ಸಂಬಂಧಿ ಸದಾ ಮುತ್ತಪ್ಪನನ್ನು ಇಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನ ಕೋವಿಯಿಂದ ತಾ. 21 ರಂದು ಕೆ.ಎಸ್. ದಿನೇಶ್ ಗುಂಡು ಹಾರಿಸಿರುವ ಹಿನ್ನೆಲೆ ಮುತ್ತಪ್ಪನನ್ನು ಬಂಧಿಸಲಾಗಿದೆ. ಕಾಡು ಹಂದಿಯೆಂದು ಊಹಿಸಿ ಗುಂಡು ಹಾರಿಸಿದ ಪರಿಣಾಮ ರಂಜಿತ್ ಮಾಚಯ್ಯ ಸಾವನ್ನಪ್ಪಿದ್ದು, ಸದಾ ಮುತ್ತಪ್ಪ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ. ಅಲ್ಲದೆ ಪ್ರಕರಣ ಸಂಬಂಧ ಮೃತ ರಂಜಿತ್ ಮಾಚಯ್ಯ ಹಾಗೂ ಸದಾ ಮುತ್ತಪ್ಪನಿಗೆ ಸೇರಿದ ಎರಡು ಒಂಟಿ ನಳಿಕೆ ಕೋವಿಗಳನ್ನು ವಶಪಡಿಸಿಕೊಂಡಿರುವದಾಗಿ ವೃತ್ತ ನಿರೀಕ್ಷಕ ಭರತ್ ಅವರು ಖಚಿತಪಡಿಸಿದ್ದಾರೆ.