ಮಡಿಕೇರಿ, ಅ. 25: ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ವಿಶ್ವ ವಿದ್ಯಾಲಯ ಹಾಕಿ ಕ್ರೀಡಾ ಪಂದ್ಯಾಟಕ್ಕೆ ಕೊಡಗು ಮತ್ತು ಮಂಗಳೂರಿನ ವಿವಿಧ ಕಾಲೇಜಿನ 18 ಹಾಕಿ ಪಟುಗಳು ಪ್ರತಿನಿಧಿಸಲಿದ್ದಾರೆ. ಈ ತಂಡವನ್ನು ಮುನ್ನಡೆಸಲು ತರಬೇತುದಾರರಾಗಿ ಮೂರ್ನಾಡು ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಕಂಬೀರಂಡ ಬೋಪಣ್ಣ ಅವರನ್ನು ವಿಶ್ವವಿದ್ಯಾನಿಲಯವು ಆಯ್ಕೆ ಮಾಡಿದೆ.
ತರಬೇತಿ ಶಿಬಿರವು ತಾ. 24ರಿಂದ ನವೆಂಬರ್ 7ರವರೆಗೆ ಮೂರ್ನಾಡು ಪದವಿ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.