ಸೋಮವಾರಪೇಟೆ, ಅ. 25: ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ತಾ. 28ರಂದು ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 26 ಮಂದಿ ಸ್ಪರ್ಧಾ ಕಣದಲ್ಲಿದ್ದು, 5323 ಮಂದಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ವಾರ್ಡ್‍ಗಳಿಗೆ ಒಂದರಂತೆ 11 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಪೈಕಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ, 6 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.

11 ವಾರ್ಡ್‍ಗಳಿಂದ 5323 ಮಂದಿ ಮತದಾರರಿದ್ದು, ಇವರಲ್ಲಿ 2593 ಮಂದಿ ಪುರುಷರು, 2730 ಮಂದಿ ಮಹಿಳಾ ಮತದಾರರಿದ್ದಾರೆ. 1ನೇ ವಾರ್ಡ್(ಬಸವೇಶ್ವರ ಬ್ಲಾಕ್)ನಲ್ಲಿ 263 ಪುರುಷ, 279 ಮಹಿಳಾ ಮತದಾರರಿದ್ದು, ಎಸ್‍ಜೆಎಂ ಪ್ರಾಥಮಿಕ ಶಾಲೆಯ ಉತ್ತರ ಪಾಶ್ರ್ವದಲ್ಲಿ ಮತಗಟ್ಟೆ ತೆರೆಯಲಾಗುತ್ತದೆ. ಇಲ್ಲಿ ಬಿಜೆಪಿಯಿಂದ ಕೆ.ಜಿ. ಸುರೇಶ್, ಕಾಂಗ್ರೆಸ್‍ನಿಂದ ಉದಯಶಂಕರ್ ಕಣದಲ್ಲಿದ್ದಾರೆ.

2ನೇ ವಾರ್ಡ್(ಪವರ್‍ಹೌಸ್ ಬ್ಲಾಕ್)ನಲ್ಲಿ ಕ್ರಮವಾಗಿ 120 (ಪು) 125 (ಮ) ಮತದಾರರಿದ್ದು, ಎಸ್‍ಜೆಎಂ ಶಾಲೆಯ ದಕ್ಷಿಣ ಪಾಶ್ರ್ವದಲ್ಲಿ ಮತಗಟ್ಟೆ ತೆರೆಯಲಾಗುತ್ತದೆ. ಬಿಜೆಪಿಯಿಂದ ಪಿ.ಕೆ. ಚಂದ್ರು, ಕಾಂಗ್ರೆಸ್‍ನಿಂದ ಮಂಜುನಾಥ್, ಪಕ್ಷೇತರರಾಗಿ ರಘುನಾಥ್ ಅವರುಗಳು ಸ್ಪರ್ಧೆಯಲ್ಲಿದ್ದಾರೆ.

3ನೇ ವಾರ್ಡ್(ವೆಂಕಟೇಶ್ವರ ಬ್ಲಾಕ್)ನಲ್ಲಿ ಕ್ರಮವಾಗಿ 217 (ಪು) 246 (ಮ) ಮತದಾರರಿದ್ದು, ಬೇಳೂರು ರಸ್ತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತಗಟ್ಟೆಯಾಗಲಿದೆ. ಬಿಜೆಪಿಯಿಂದ ನಳಿನಿ ಗಣೇಶ್, ಜೆಡಿಎಸ್‍ನಿಂದ ಕೆ.ಎಂ. ಪುಷ್ಪ, ಪಕ್ಷೇತರರಾಗಿ ನೀಲಾವತಿ ಕಣದಲ್ಲಿ ಉಳಿದಿದ್ದಾರೆ.

4ನೇ ವಾರ್ಡ್ (ರೇಂಜರ್ ಬ್ಲಾಕ್-1ನೇ ಹಂತ)ನಲ್ಲಿ 235 (ಪು) 246 (ಮ) ಮತದಾರರಿದ್ದು, ಮಹಿಳಾ ಸಮಾಜದ ಪಶ್ಚಿಮ ಪಾಶ್ರ್ವದಲ್ಲಿ ಮತಗಟ್ಟೆ ಸ್ಥಾಪಿಸಲಾಗುತ್ತದೆ. ಬಿಜೆಪಿಯಿಂದ ಎನ್.ಎಸ್. ಮೂರ್ತಿ, ಕಾಂಗ್ರೆಸ್‍ನಿಂದ ಸಂಜೀವ ಸ್ಪರ್ಧೆಯಲ್ಲಿದ್ದಾರೆ.

5ನೇ ವಾರ್ಡ್(ತ್ಯಾಗರಾಜ ರಸ್ತೆ)ನಲ್ಲಿ 243 (ಪು) 246 (ಮ) ಮತದಾರರಿದ್ದು, ಎಸ್‍ಜೆಎಂ ಬಾಲಿಕ ಪ್ರೌಢಶಾಲೆಯಲ್ಲಿ ಮತಗಟ್ಟೆ ತೆರೆಯಲಾಗಿದೆ. ಬಿಜೆಪಿಯಿಂದ ಬಿ.ಎಂ. ಸುರೇಶ್, ಕಾಂಗ್ರೆಸ್‍ನಿಂದ ಬಿ.ಸಿ. ವೆಂಕಟೇಶ್ ಕಣದಲ್ಲಿದ್ದಾರೆ. 6ನೇ ವಾರ್ಡ್(ವಿಶ್ವೇಶ್ವರಯ್ಯ ಬ್ಲಾಕ್)ನಲ್ಲಿ 237 (ಪು) 223 (ಮ) ಮತದಾರರಿದ್ದು, ಚನ್ನಬಸಪ್ಪ ಸಭಾಂಗಣದಲ್ಲಿ ಮತ ಚಲಾಯಿಸಬೇಕಿದೆ. ಬಿಜೆಪಿಯಿಂದ ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್‍ನಿಂದ ಶೀಲಾ ಡಿಸೋಜ ಸ್ಪರ್ಧೆಗಿಳಿದಿದ್ದಾರೆ.

7ನೇ ವಾರ್ಡ್(ರೇಂಜರ್ ಬ್ಲಾಕ್ 2ನೇ ಹಂತ)ನಲ್ಲಿ 205 (ಪು) 227 (ಮ) ಮತದಾರರಿದ್ದು, ಮಹಿಳಾ ಸಮಾಜದ ಪೂರ್ವ ಪಾಶ್ರ್ವದಲ್ಲಿ ಮತಗಟ್ಟೆಯಿದೆ. ಬಿಜೆಪಿಯಿಂದ ದಾಕ್ಷಾಯಿಣಿ, ಜೆಡಿಎಸ್‍ನಿಂದ ಜೀವನ್ ಕಣದಲ್ಲಿದ್ದಾರೆ. 8ನೇ ವಾರ್ಡ್ (ಜನತಾ ಕಾಲೋನಿ)ನಲ್ಲಿ 201 (ಪು) 237 (ಮ) ಮತದಾರರಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಮತಗಟ್ಟೆ ತೆರೆಯಲಾಗುತ್ತಿದೆ. ಬಿಜೆಪಿಯಿಂದ ಪ್ರಮೋದ್, ಜೆಡಿಎಸ್‍ನಿಂದ ವೆಂಕಟೇಶ್, ಪಕ್ಷೇತರರಾಗಿ ಶುಭಕರ್ ಅವರುಗಳು ಸ್ಪರ್ಧಾ ಕಣದಲ್ಲಿದ್ದಾರೆ.

9ನೇ ವಾರ್ಡ್(ಸಿದ್ಧಲಿಂಗೇಶ್ವರ ಬ್ಲಾಕ್)ನಲ್ಲಿ 206 (ಪು) 224 (ಮ) ಮತದಾರರಿದ್ದು, ಪಟ್ಟಣ ಪಂಚಾಯಿತಿ ಕಚೇರಿಯ ದಕ್ಷಿಣ ಪಾಶ್ರ್ವದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿಯಿಂದ ಅನಿತಾ, ಜೆಡಿಎಸ್‍ನಿಂದ ನಾಗರತ್ನ ಸ್ಪರ್ಧೆಗಿಳಿದಿದ್ದಾರೆ. 10ನೇ ವಾರ್ಡ್(ಮಹದೇಶ್ವರ ಬ್ಲಾಕ್)ನಲ್ಲಿ 421 (ಪು) 436 (ಮ) ಮತದಾರರಿದ್ದು, ಪಟ್ಟಣ ಪಂಚಾಯಿತಿ ಕಚೇರಿಯ ಉತ್ತರ ಪಾಶ್ರ್ವದಲ್ಲಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಬಿಜೆಪಿಯಿಂದ ದಿವ್ಯಾ ಮೋಹನ್, ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಗೀತಾ ಹರೀಶ್ ಕಣದಲ್ಲಿದ್ದಾರೆ.

11ನೇ ವಾರ್ಡ್(ಸಿ.ಕೆ.ಸುಬ್ಬಯ್ಯ ಬ್ಲಾಕ್)ನಲ್ಲಿ 245 (ಪು) 241 (ಮ) ಮತದಾರರಿದ್ದು, ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮತದಾನ ಮಾಡಬೇಕಿದೆ. ಬಿಜೆಪಿಯಿಂದ ಬಿ.ಆರ್. ಮಹೇಶ್, ಕಾಂಗ್ರೆಸ್‍ನಿಂದ ಕೆ.ಎ. ಆದಂ ಅವರುಗಳು ಸ್ಪರ್ಧೆಯಲ್ಲಿದ್ದಾರೆ.