ವೀರಾಜಪೇಟೆ, ಅ. 24: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಿಂದ ತಾ. 2-6-17ರಂದು ಮೈತಾಡಿ ಗ್ರಾಮದ ಕಾವೇರಿ ಹೊಳೆ ದಡದಲ್ಲಿ ವಶಪಡಿಸಿ ಕೊಂಡ ವಾರಿಸುದಾರರಿಲ್ಲದ ಎಂಟು ಕಭ್ಬಿಣದ ತೆಪ್ಪಗಳನ್ನು ತಾ.30ರಂದು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸಭಾಂಗಣದಲ್ಲಿ ಬಹಿರಂಗವಾಗಿ ಹರಾಜು ಮಾಡಲಾಗುವದು ಎಂದು ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.