ಮಡಿಕೇರಿ, ಅ. 24: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಕೊಡಗು ಮೂಲದವರಾದ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರನ್ನು ಅಸ್ಸಾಂನ ಗೌಹಾಟಿಯ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‍ನ ಕೊಲಿಜಿಯಂ ನೀಡಿದ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಅಂಗೀಕಾರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಪಣ್ಣ ಅವರನ್ನು ನೇಮಕ ಮಾಡಲು ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದು, ಅಸ್ಸಾಂ ರಾಜ್ಯಪಾಲರ ದಿನಾಂಕ ಹೊಂದಿಕೊಂಡು ಬೋಪಣ್ಣ ಅಧಿಕಾರ ಸ್ವೀಕರಿಸಲಿರುವದಾಗಿ ತಿಳಿದು ಬಂದಿದೆ.