ಮಡಿಕೇರಿ, ಅ. 23: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಪ್ರಾಕೃತಿಕ ದುರಂತದಿಂದಾಗಿ ಉಂಟಾದ ಸಮಸ್ಯೆಗಳು ಒಂದೆರಡು ರೀತಿಯಲ್ಲಿಲ್ಲ. ಈ ಸನ್ನಿವೇಶದ ಹೊಡೆತ ಬಗೆ ಬಗೆಯಲ್ಲಿದೆ. ಕೃಷಿ ಫಸಲುಗಳು, ಮಾನವ-ಜಾನುವಾರು ಪ್ರಾಣಹಾನಿ, ಬೆಟ್ಟ ಕುಸಿತ, ರಸ್ತೆ ಕುಸಿತ, ಮನೆಗಳು ಧರಾಶಾಹಿಯಾಗಿರುವದು ಇಂತಹ ಹಲವಷ್ಟು ಸಮಸ್ಯೆಗಳು ಮರೆಯಲಾಗದಂತದ್ದು... ಇವುಗಳು ಪ್ರವಾಸೋದ್ಯಮದ ಮೂಲಕ ಕಳೆದ ಕೆಲವು ವರ್ಷಗಳಿಂದ ಗುರುತಿಸಿಕೊಂಡಿದ್ದ ಕೊಡಗಿನ ಪ್ರವಾಸೋದ್ಯಮದ ಮೇಲೂ ಪೆಟ್ಟು ನೀಡಿರುವದು ಎಲ್ಲರಿಗೂ ಅರಿವಿದೆ.ಕೊಡಗಿನ ದುರಂತ ಭಾರೀ ಪ್ರಚಾರಕ್ಕೂ ಕಾರಣವಾದ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರ ಆಗಮನಕ್ಕೆ ತಡೆ, ಹೊಟೇಲ್, ರೆಸಾರ್ಟ್, ಹೋಂ ಸ್ಟೇಗಳಿಗೆ ನಿರ್ಬಂಧ ವಿಧಿಸಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.ದೈನಂದಿನ ಅಗತ್ಯತೆಗಳಲ್ಲಿ ಒಂದಾದ ಹಾಲಿನ ಪೂರೈಕೆ ಜಿಲ್ಲೆಗೆ ಕೂಡಿಗೆÀಯ ಡೈರಿಯ ಮೂಲಕ ವಿತರಿಸಲ್ಪಡುತ್ತದೆ. ಜಿಲ್ಲೆಯ 14 ಮಾರ್ಗಗಳಲ್ಲಿ ಹಾಲಿನ ವಿತರಣೆಯಾಗುತ್ತಿದ್ದು, ದಿನಂಪ್ರತಿ 48 ರಿಂದ 49 ಸಾವಿರ ಲೀಟರ್ಗಳಷ್ಟು ಹಾಲು ಬಳಕೆಯಾಗುತ್ತಿತ್ತು. ಆದರೆ ಮಳೆಯ ಪರಿಣಾಮದಿಂದಾಗಿ ನಂತರದ ದಿನಗಳಲ್ಲಿ ಈ ಪ್ರಮಾಣ ಸುಮಾರು ಐದು ಸಾವಿರ ಲೀಟರ್ಗಳಷ್ಟು ಕಡಿಮೆಯಾಗಿದೆ. ಹೊಟೇಲ್, ಹೋಂಸ್ಟೇ, ರೆಸಾರ್ಟ್ಗಳು ಇನ್ನೂ ಚೇತರಿಸಿಕೊಳ್ಳದ ಪರಿಸ್ಥಿತಿಯಿಂದಾಗಿ ಇಷ್ಟು ಪ್ರಮಾಣದ ಹಾಲಿನ ಬಳಕೆ ಕುಂಠಿತಗೊಂಡಿರುವದಾಗಿ ಹೇಳಲಾಗುತ್ತಿದೆ. ಅದರಲ್ಲೂ ಮಡಿಕೇರಿ ವಿಭಾಗ ಹಾಗೂ ಭಾಗಮಂಡಲ ವಿಭಾಗಗಳಲ್ಲಿ ಐದು ಸಾವಿರ ಲೀಟರ್ನಷ್ಟು ಹಾಲಿನ ಪೂರೈಕೆ ಕಡಿಮೆಯಾಗಿದ್ದು, ಇನ್ನಷ್ಟೆ ಚೇತರಿಕೆ ಕಾಣಬೇಕಿದೆ.