ಮಡಿಕೇರಿ, ಅ. 23: ಹೆಮ್ಮೆತ್ತಾಳು ಗ್ರಾಮದಲ್ಲಿ ಬೇಟೆಗೆ ತೆರಳಿದ್ದ ವೇಳೆ ಗುಂಡೇಟಿನಿಂದ ಅಯ್ಯಕುಟ್ಟಿರ ರಂಜಿತ್ ಮಾಚಯ್ಯ ಎಂಬವರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿ ಕಾಳಿಮಾಡ ದಿನೇಶ್ ದೇವಯ್ಯ ಎಂಬಾತನನ್ನು ಜಿಲ್ಲಾ ಅಪರಾಧ ಪತ್ತೆದಳ ಬಂಧಿಸಿದೆ.ತಾ.18 ರಂದು ದಕ್ಷಿಣ ಕೊಡಗಿನ ವೆಸ್ಟ್ನೆಮ್ಮಾಲೆ ಗ್ರಾಮದ ಕಾಳೀಮಾಡ ದಿನೇಶ್ ದೇವಯ್ಯ ಎಮ್ಮೆತಾಳು ಗ್ರಾಮದಲ್ಲಿ ತನ್ನ ಮಾವನ ಮನೆಗೆ ಬಂದಿದ್ದು, ತಾ. 21 ರಂದು ಸಂಜೆ ಸ್ನೇಹಿತ ಅಯ್ಯಕುಟ್ಟೀರ ರಂಜಿತ್ ಮಾಚಯ್ಯನೊಂದಿಗೆ ಹಂದಿ ಬೇಟೆಗೆಂದು ತೆರಳಿದ್ದ ವೇಳೆ ಹಂದಿಗೆಂದು ಹೊಡೆದ ಗುಂಡು ರಂಜಿತ್ ಮಾಚಯ್ಯಗೆ ತಗುಲಿ ರಂಜಿತ್ ಮಾಚಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟಣೆ ಬಳಿಕ ತಲೆಮರೆಸಿ ಕೊಂಡಿದ್ದ ದಿನೇಶ್ ದೇವಯ್ಯನನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಮನ್ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಎಂ. ಮಹೇಶ್, ಎಎಸ್ಐ ಕೆ.ವೈ. ಹಮ್ಮೀದ್, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್,
(ಮೊದಲ ಪುಟದಿಂದ) ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್ ಕುಮಾರ್, ಎನ್.ಟಿ. ತಮ್ಮಯ್ಯ, ಕೆ.ಆರ್. ವಸಂತ, ವಿ.ಜಿ. ವೆಂಕಟೇಶ್, ಚಾಲಕರಾದ ಕೆ.ಎಸ್. ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಯನ್ನು ಪತ್ತೆ ಹಚ್ಚಿದ ಡಿಸಿಐಬಿ ತಂಡಕ್ಕೆ ಎಸ್ಪಿ ರೂ. 5 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.