ಮಡಿಕೇರಿ, ಅ. 22: ಕಿರುಗೂರು ಗ್ರಾಮದಲ್ಲಿರುವ ಮಹದೇವರ ದೇವಾಲಯ ಆಡಳಿತ ಮಂಡಳಿಯಿಂದ ಕಿರುಗೂರು ಗ್ರಾಮಸ್ಥರಿಂದ ಸಂಗ್ರಹಿಸಿದ 65 ಸಾವಿರ ರೂಪಾಯಿಯನ್ನು ಸಂತ್ರಸ್ತ ಮೂರು ಕುಟುಂಬಕ್ಕೆ ನೀಡಲಾಗಿದೆ.
ಮಹದೇವರ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಚೆಪ್ಪುಡೀರ ವಿವೇಕ್ ಸುಬ್ಬಯ್ಯ, ಕಾರ್ಯದರ್ಶಿ ಕಾಕಮಾಡ ದೀಕ್ಷಿತ್, ನಿರ್ದೇಶಕರಾದ ಗಾಣಂಗಡ ಚಿಪ್ಪುಣು ಉತ್ತಯ್ಯ, ಚೆಪ್ಪುಡೀರ ರಾಕೇಶ್ ದೇವಯ್ಯ, ಚೆಪ್ಪುಡೀರ ರಾಜೇಶ್ ಉತ್ತಪ್ಪ ಅವರು ಸಂತ್ರಸ್ತರ ಮನೆಗಳಿಗೆ ಖುದ್ದು ಭೇಟಿ ನೀಡಿ, ನೆರವಿನ ಹಣ ನೀಡಿದರು. ಸಂತ್ರಸ್ತರಾಗಿರುವ ಉದಿಯಂಡ ಕವಿತಾ, ಚನ್ನಪಂಡ ಬನ್ಸಿ ಪೂಣಚ್ಚ ಅವರಿಗೆ ತಲಾ 25 ಸಾವಿರ, ಚಾಮೇರ ನಾಣಯ್ಯ ಅವರಿಗೆ 15 ಸಾವಿರ ರೂ. ನೀಡಲಾಯಿತು. ಕವಿತಾ ಹಾಗೂ ಬನ್ಸಿ ಪೂಣಚ್ಚ ಕುಟುಂಬಕ್ಕೆ ಆರು ತಿಂಗಳಿಗೆ ಆಗುವಷ್ಟು ಅಕ್ಕಿ ಸೇರಿದಂತೆ ಇತರೆ ವಸ್ತುಗಳನ್ನು ನೀಡಲಾಯಿತು. ಕಿರುಗೂರು ಮಹದೇವರ ಆಡಳಿತ ಮಂಡಳಿಯಿಂದ ಕಿರುಗೂರು ಗ್ರಾಮಸ್ಥರಿಂದ ಸಂಗ್ರಹಿಸಿರುವ ಹಣವನ್ನು ನಿಮಗೆ ನೀಡುತ್ತಿದ್ದೇವೆ.