ಮಡಿಕೇರಿ, ಅ. 21 : ರೈತರು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಆಹಾರವನ್ನು ವ್ಯರ್ಥ ಮಾಡದೆ ಭವಿಷ್ಯದಲ್ಲಿ ಎದುರಾಗಬಹುದಾದ ಅನ್ನಕ್ಷಾಮವನ್ನು ತಡೆಗಟ್ಟುವ ದಿಸೆಯಲ್ಲಿ ಪ್ರತಿಯೊಬ್ಬರೂ ಆಹಾರವನ್ನು ಸಂರಕ್ಷಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಕರೆ ನೀಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕೊಡಗು ಜಿಲ್ಲಾ ಸಮಿತಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕುಶಾಲನಗರ ಆಹಾರ ಸಂರಕ್ಷಣಾ ಅಭಿಯಾನ ಸಮಿತಿ ವತಿಯಿಂದ ನಗರದ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ‘ವಿಶ್ವ ಆಹಾರ ದಿನ’ದ ಅಂಗವಾಗಿ ಏರ್ಪಡಿಸಿದ್ದ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದಲ್ಲಿ ಆಹಾರ ಸಂರಕ್ಷಣೆ ಕುರಿತ ಪ್ರಚಾರ ಫಲಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದೇಶದಲ್ಲಿ ಆಹಾರ ಭದ್ರತೆ ಕಾಪಾಡುವ ದಿಸೆಯಲ್ಲಿ ಆಹಾರ ವ್ಯರ್ಥವಾಗುವದನ್ನು ತಡೆಗಟ್ಟುವ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
‘ಆಹಾರ ಸಂರಕ್ಷಣೆ’ ಕುರಿತ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿದ್ಯಾಭವನ ಕೊಡಗು ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ‘ವಿಶ್ವ ಆಹಾರ ದಿನ’ದ ಅಂಗವಾಗಿ ಏರ್ಪಡಿಸಿದ್ದ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದಲ್ಲಿ ಆಹಾರ ಸಂರಕ್ಷಣೆ ಕುರಿತ ಪ್ರಚಾರ ಫಲಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದೇಶದಲ್ಲಿ ಆಹಾರ ಭದ್ರತೆ ಕಾಪಾಡುವ ದಿಸೆಯಲ್ಲಿ ಆಹಾರ ವ್ಯರ್ಥವಾಗುವದನ್ನು ತಡೆಗಟ್ಟುವ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
‘ಆಹಾರ ಸಂರಕ್ಷಣೆ’ ಕುರಿತ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾಂಡು ಮಾತನಾಡಿ, ಶಾಲೆಗಳಲ್ಲಿನ ಬಿಸಿಯೂಟ ಯೋಜನೆಯಲ್ಲಿ ಆಹಾರ ಅಪವ್ಯಯ ತಡೆಗಟ್ಟಲು ಕ್ರಮಕೈಗೊಳ್ಳಲಾಗಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ನ ಅಧ್ಯಕ್ಷ ಜಿ.ಆರ್.ರವಿಶಂಕರ್, ಕಾರ್ಯದರ್ಶಿ ಎಂ.ಯು.ಮಹೇಶ್, ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್, ವಿಜ್ಞಾನ ಪರಿಷತ್ತಿನ ಸಮಿತಿ ಸದಸ್ಯರಾದ ಸಿ.ಎಸ್.ಸುರೇಶ್, ಇ. ಸುಲೇಮಾನ್, ಜಿ. ಶ್ರೀಹರ್ಷ, ಕೊಡಗು ವಿದ್ಯಾಲಯ ಪ್ರಾಂಶುಪಾಲೆ ವನಿತಾ ಚಂಗಪ್ಪ, ಶಿಕ್ಷಕಿಯರಾದ ಪಿ.ಎಸ್. ಕಾವೇರಮ್ಮ, ಕೆ.ಎ. ಮೀರಾ, ಟಿ. ಜಯಶ್ರೀ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರೋಟರಿ ಹಾಲ್ ಬಳಿ ನಂತರ ನಡೆದ ಜಾಗೃತಿ ಅಭಿಯಾನದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಮಗೆ ತಿನ್ನುವ ಹಕ್ಕಿದೆ; ಬಿಸಾಡುವ ಹಕ್ಕು ನಮಗಿಲ್ಲ, ಆಹಾರ ಉಳಿಸೋಣ; ಹಸಿವು ತಣಿಸೋಣ, ಅನ್ನಕ್ಕಾಗಿ ಪರದಾಟ; ತಿಂದು ಹೆಚ್ಚಾಗಿ ಎಸೆದಾಟ, ಪ್ರತಿ ಕಾಳೂ ರೈತನ ರಕ್ತದಿಂದ ಜನಿಸಿರುತ್ತದೆ, ಅಗತ್ಯಕ್ಕಿಂತ ಅಧಿಕ ಆಹಾರ ಬಡಿಸಿಕೊಂಡು ತಿಪ್ಪೆಗೆಸೆಯದಿರಿ ಎಂಬಿತ್ಯಾದಿ ಘೋಷಣೆಗಳ ಫಲಕ ಹಿಡಿದು ಆಹಾರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.