ಸೋಮವಾರಪೇಟೆ,ಅ.21: ಮಹಿಳೆಯರೂ ಸಹ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿಂದ ತೊಡಗಿಸಿಕೊಂಡಿದ್ದೇ ಆದಲ್ಲಿ ಆರ್ಥಿಕವಾಗಿ ಸಬಲರಾಗ ಬಹುದು ಎಂದು ಪ್ರಗತಿಪರ ಕೃಷಿಕ ಮಹಿಳೆ ನಿರ್ಮಲಾ ಪ್ರಕಾಶ್ ಅಭಿಪ್ರಾಯಿಸಿದರು.
ಇಲ್ಲಿನ ಕೃಷಿ ಇಲಾಖೆಯ ಸೋಮವಾರಪೇಟೆ,ಅ.21: ಮಹಿಳೆಯರೂ ಸಹ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿಂದ ತೊಡಗಿಸಿಕೊಂಡಿದ್ದೇ ಆದಲ್ಲಿ ಆರ್ಥಿಕವಾಗಿ ಸಬಲರಾಗ ಬಹುದು ಎಂದು ಪ್ರಗತಿಪರ ಕೃಷಿಕ ಮಹಿಳೆ ನಿರ್ಮಲಾ ಪ್ರಕಾಶ್ ಅಭಿಪ್ರಾಯಿಸಿದರು.
ಇಲ್ಲಿನ ಕೃಷಿ ಇಲಾಖೆಯ ಕೃಷಿ ಕ್ಷೇತ್ರದಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ವಕೀಲರಾದ ಪವಿತ್ರರವರು ಮಹಿಳೆಯರ ರಕ್ಷಣೆಗೆ ಇರುವ ಕಾನೂನಿನ ಬಗ್ಗೆ ಉಪನ್ಯಾಸ ನೀಡಿದರು.
ಆಚರಣೆಯ ಅಂಗವಾಗಿ ಕೃಷಿ ಇಲಾಖಾ ವತಿಯಿಂದ ಕೃಷಿ ಪರಿಕರಗಳ ವಸ್ತು ಪ್ರದರ್ಶನ, ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ್ದ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು.
ಕೃಷಿ ಇಲಾಖೆಯ ವತಿಯಿಂದ ನೀಡುವ ಸಹಾಯ, ಸವಲತ್ತುಗಳ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಎಚ್.ಎಸ್. ರಾಜಶೇಖರ್ ಹಾಗೂ ತಾಂತ್ರಿಕ ಅಧಿಕಾರಿ ಎಸ್. ಮುಕುಂದ, ಕೃಷಿ ಅಧಿಕಾರಿ ನವ್ಯ ನಾಣಯ್ಯ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಜಿ.ಜೆ. ಪಲ್ಲವಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು. ಹರಗ, ಚೌಡ್ಲು, ಅಭಿಮಠ ಬಾಚಳ್ಳಿ, ಕುಶಾಲನಗರ ದಿಂದ ರೈತ ಮಹಿಳೆಯರು ಹಾಗೂ ವಿವಿಧ ಸ್ವಸಹಾಯ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.