ಮಡಿಕೇರಿ, ಅ. 20: ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಸೀಮಿತವಾಗಿದ್ದ ಮಡಿಕೇರಿ ದಸರಾ; ದಶಮಂಟಪಗಳ ವೈಭವದೊಂದಿಗೆ ಕಳೆಗಟ್ಟಿತ್ತು. ದಸರಾದ ಪ್ರಮುಖ ಆಕರ್ಷಣೆಯಾದ ಹತ್ತು ಮಂಟಪಗಳು ಎಂದಿನಂತೆ ತೀರಾ ಆಡಂಬರವಿಲ್ಲದಿದ್ದರೂ ಜನಮನ ಸೂರೆಗೊಳ್ಳುವ ರೀತಿಯಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡವು. ಬ್ಯಾಂಡ್, ವಾಲಗ, ಡಿಜೆಯ ಅಬ್ಬರ ಎಲ್ಲೆಡೆ ಪಸರಿಸಿತ್ತು. ಈ ಬಾರಿ ಮಂಟಪಗಳ ನಡುವೆ ಪೈಪೋಟಿ ಇಲ್ಲದಿದ್ದರೂ ಸಹ ಮಂಟಪಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಸಜ್ಜುಗೊಂಡಿದ್ದವು.ನಂದಿಯಿಂದ ಶಿವನ ದರ್ಶನ ಕಥಾ ಸಾರಾಂಶದೊಂದಿಗೆ ಪೇಟೆ ಶ್ರೀ ರಾಮಮಂದಿರ ದೇವಾಲಯ, ಗಣಪತಿಯಿಂದ ಗಜಾಸುರ ಸಂಹಾರ ಕಥಾಸಾರಾಂಶದೊಂದಿಗೆ ಚೌಡೇಶ್ವರಿ ಹಾಗೂ ಕಂಚಿಕಾಮಾಕ್ಷಿ ದೇವಾಲಯ, ದಕ್ಷ ಯಜ್ಞ ಕಥಾ ಸಾರಾಂಶದೊಂದಿಗೆ ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಪಂಚಮುಖಿ ಆಂಜನೇಯನ ದರ್ಶನದೊಂದಿಗೆ ದೇಚೂರು ಶ್ರೀ ಮಂಟಪಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಸಜ್ಜುಗೊಂಡಿದ್ದವು.
ನಂದಿಯಿಂದ ಶಿವನ ದರ್ಶನ ಕಥಾ ಸಾರಾಂಶದೊಂದಿಗೆ ಪೇಟೆ ಶ್ರೀ ರಾಮಮಂದಿರ ದೇವಾಲಯ, ಗಣಪತಿಯಿಂದ ಗಜಾಸುರ ಸಂಹಾರ ಕಥಾಸಾರಾಂಶದೊಂದಿಗೆ ಚೌಡೇಶ್ವರಿ ಹಾಗೂ ಕಂಚಿಕಾಮಾಕ್ಷಿ ದೇವಾಲಯ, ದಕ್ಷ ಯಜ್ಞ ಕಥಾ ಸಾರಾಂಶದೊಂದಿಗೆ ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಪಂಚಮುಖಿ ಆಂಜನೇಯನ ದರ್ಶನದೊಂದಿಗೆ ದೇಚೂರು ಶ್ರೀ ನಿಶುಂಭ ಸಂಹಾರ ಕಥಾ ಸಾರಾಂಶದೊಂದಿಗೆ ದಂಡಿನ ಮಾರಿಯಮ್ಮ ದೇವಾಲಯ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.
ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚಂದಾ ವಸೂಲಿ ಆಗದಿದ್ದರೂ ಹತ್ತು ಮಂಟಪ ಸಮಿತಿಯವರು ಆಕರ್ಷಣೀಯ ರೀತಿಯಲ್ಲೇ ಮಂಟಪಗಳನ್ನು ಹೊರತಂದಿದ್ದರು. ಕೆಲವು ಮಂಟಪಗಳು ಜನರಿಗೆ ದೇವದಾನವರ ಕಾಳಗ ಕಥಾ ಹಂದರದ ಪ್ರದರ್ಶನವನ್ನು ಕೂಡ ಮಾಡಿದವು. ಇನ್ನುಳಿದ ಮಂಟಪಗಳು ಸ್ತಬ್ಧ ಕಲಾಕೃತಿಗಳನ್ನು ಅಳವಡಿಸಿದ್ದವು. ಜನಸಂಖ್ಯೆ ತೀರಾ ವಿರಳವಾಗಿದ್ದರೂ ಕೂಡ ದಶಮಂಟಪಗಳು ದಸರಾದಲ್ಲಿ ಎಂದಿನಂತೆ ಈ ಬಾರಿಯೂ ಛಾಪು ಮೂಡಿಸಿದವು.
ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ದಶಮಂಟಪ ಸಮಿತಿಯ ಹಲವು ಸಭೆಗಳಲ್ಲಿ ಈ ಬಾರಿ ಸರಳ ದಸರಾ ಹಿನ್ನೆಲೆಯಲ್ಲಿ ಮಂಟಪಗಳನ್ನು ಸರಳವಾಗಿ ಹೊರಡಿಸುವದಾಗಿ ಮಂಟಪ ಸಮಿತಿಗಳ ಪದಾಧಿಕಾರಿಗಳು ಹೇಳಿಕೆ ನೀಡಿದ್ದರಿಂದ ಈ ಬಾರಿ ದಸರಾದಲ್ಲಿ ಮಂಟಪಗಳು ಅಷ್ಟಾಗಿ ಗಮನ ಸೆಳೆಯುವದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.
ಆದರೆ, ಕಳೆದ ರಾತ್ರಿ ಆಕರ್ಷಕವಾಗಿ ಮಂಟಪಗಳು ತಯಾರಾಗಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದವು. ಡಿಜೆ, ವಾಲಗದ ಅಬ್ಬರಕ್ಕೆ ಯುವಕರು, ಯುವತಿಯರು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ಶೋಭಾಯಾತ್ರೆ ಬಳಿಕ ಮಂಟಪಗಳು ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ದಸರೆಗೆ ತೆರೆ ಎಳೆಯಲಾಯಿತು.