ಒಡೆಯನಪುರ, ಅ. 20: ವಿಶ್ವ ದ್ಯಾದಂತ ವಿದ್ಯಾರ್ಥಿಗಳ ಇಂಟ್ರ್ಯಾಕ್ಟ್ ಕ್ಲಬ್ ಉತ್ತಮವಾಗಿ ಕಾರ್ಯನಿರ್ವ ಹಿಸುತ್ತಿದ್ದು ಜನಮೆಚ್ಚಿಗೆಗೆ ಪಾತ್ರ ವಾಗುತ್ತಿದೆ ಎಂದು ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಅಭಿಪ್ರಾಯಪಟ್ಟರು.

ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಸಮಿಪದ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಸ್ಥಾಪನೆ ಮಾಡಿರುವ ವಿದ್ಯಾರ್ಥಿಗಳ ಇಂಟ್ರ್ಯಾಕ್ಟ್ ಕ್ಲಬ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. 12 ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಇಂಟ್ರ್ಯಾಕ್ಟ್ ಕ್ಲಬ್ ಘಟಕದ ಸದಸ್ಯರಾಗುವದರ ಮೂಲಕ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತೊಡಗಿಸಿ ಕೊಳ್ಳಬೇಕೆಂದರು.

ಜಿಲ್ಲಾ ರೋಟರಿ ಕ್ಲಬ್ ಗೌವರ್ನರ್ ಮಹೇಶ್‍ಕುಮಾರ್ ನಲ್‍ವಾಡೆ ಮಾತನಾಡಿ, ರೋಟರಿ ಸಂಸ್ಥೆ ಸಮಾಜ ಸೇವೆ ಸಂಸ್ಥೆಯಾಗಿದೆ. ಹಲವಾರು ರೀತಿಯ ಸಮಾಜ ಸೇವೆಯನ್ನು ಮಾಡುತ್ತಿದೆ ಎಂದರು.

ರೋಟರಿ ಸಂಸ್ಥೆಯ ಇಂಟ್ರ್ಯಾಕ್ಟ್ ಘಟಕದ ಛೇರ್‍ಮೆನ್ ಎಂ.ಡಿ. ಅಶೋಕ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವೆಯಂತಹ ಮೌಲ್ಯಗಳನ್ನು ಅಳವಡಿಸಿ ಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್, ಸ್ಥಾಪಕ ಅಧ್ಯಕ್ಷ ಹೆಚ್.ವಿ. ದಿವಾಕರ್, ನಿಯೋಜಿತ ಅಧ್ಯಕ್ಷ ಶುಭು, ಪ್ರಮುಖರಾದ ಸಂದೀಪ್, ಸುದೀಪ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಎಂ. ಹೇಮಂತ್ ಮುಂತಾದವರಿದ್ದರು.