ಕೂಡಿಗೆ, ಅ. 18. ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಾಡಾನೆಗಳು ಬೆಳೆಯನ್ನು ತುಳಿದು ನಷ್ಟಪಡಿಸಿದೆ. ಇಲ್ಲಿನ ಗಣೇಶ್, ಚಂದ್ರಗೌಡ, ಶಿವಣ್ಣ, ಮಲ್ಲಪ್ಪ, ಎಂಬವರಿಗೆ ಸೇರಿದ ಜಮೀನಿನಲ್ಲಿ ಬೆಳೆಯಲಾದ ಬಾಳೆ, ಕೇನೆ ಇತರ ಬೆಳೆಗಳನ್ನು ತಿಂದು ತುಳಿದು ನಪ್ಟಪಡಿಸಿವೆ. ಸೀಗೆಹೊಸೂರು ಗ್ರಾಮದ ಕಾಡಂಚಿನಲ್ಲಿ ಕಂದಕಗಳನ್ನು ತೆಗೆಯಲಾಗಿದೆ. ಆದರೆ ಒಂದು ಜಾಗದಲ್ಲಿ ಕಂದಕ ತೆಗೆಯುವ ಸಂದಭರ್Àದಲ್ಲಿ ಬೃಹತ್ ಗಾತ್ರದ ಕಲ್ಲು ಸಿಕ್ಕಿದ್ದು ಅದನ್ನು ತೆಗೆದಿರುವದಿಲ್ಲ ಕಾಡಾನೆಗಳು ಅ ಕಲ್ಲಿನ ಮೂಲಕ ದಾಟಿ ಬರುತ್ತಿವೆ. ಸಂಬಂಧಪಟ್ಟ ಅರಣ್ಯ ಇಲಾಖೆಯವರು ಶೀಘ್ರದಲ್ಲಿ ಈ ಕಲ್ಲುಗಳನ್ನು ತೆಗೆಯುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಟಿ.ಕೆ. ವಿಶ್ವನಾಥ, ಸೇರಿದಂತೆ ರೈತರು ಆಗ್ರಹಿಸಿದ್ದಾರೆ.