ಮಡಿಕೇರಿ, ಅ. 17: ಜೋಡುಪಾಲದಲ್ಲಿ ಪ್ರಕೃತಿ ದುರಂತ ಘಟಿಸಿದಾಗ, ಅನೇಕ ಯುವಕರು ಬೇಧಭಾವ ಮರೆತು ಸಂತ್ರಸ್ತರ ರಕ್ಷಣೆಗೆ ಮುಂದಾಗಿದ್ದರು. ತಮ್ಮ ಪ್ರಾಣದ ಹಂಗು ತೊರೆದು ನೂರಾರು ಸಂತ್ರಸ್ತರನ್ನು ರಕ್ಷಿಸಿದರು. ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿದ ಎಸ್‍ಕೆಎಸ್‍ಎಸ್‍ಎಫ್ ಮತ್ತು ಭಜರಂಗದಳದ 16 ಮಂದಿ ಯುವಕರನ್ನು ಅರಂತೋಡಿನ ತೆಕ್ಕಿಲ್ ಗ್ರಾಮಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮದ್ 16 ಮಂದಿ ಸಾಹಸಿ ಯುವಕರಿಗೆ ‘ತೆಕ್ಕಿಲ್ ಎಕ್ಸಲೆನ್ಸ್’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ಎಸ್‍ಕೆಎಸ್‍ಎಸ್‍ಎಫ್‍ನ ತಾಜುದ್ದೀನ್ ಟರ್ಲಿ, ಜಮಾಲುದ್ದೀನ್ ಬೆಳ್ಳಾರೆ, ಎಸ್. ತಾಜುದ್ದೀನ್, ಎಸ್.ಎಂ. ಮುನೀರ್, ಕೆ.ಎಂ. ಅನ್ವರ್, ಸರ್ಫುದ್ದೀನ್, ಅಜಾರುದ್ದೀನ್, ಅಯೂಫ್, ಮುಬಾರಕ್, ಆರಿಫ್ ಬೆಳ್ಳಾರೆ, ಅಬ್ದುಲ್ ಶಫೀಕ್ ಬೆಳ್ಳಾರೆ, ಕೆ.ಎಂ. ಅಬ್ದುಲ್ ಖಾದರ್, ಭಜರಂಗದಳದ ಕೆ.ಎಸ್. ಮನೋಹರ್, ಬಿಪಿನ್ ಕಲ್ಲುಗುಂಡಿ, ವಿಜಯ ನಿಡಿಂಜಿ, ದಿನೇಶ್ ಕಲ್ಲುಗುಂಡಿ ಅವರುಗಳು ಪ್ರಶಸ್ತಿ ಸ್ವೀಕರಿಸಿದರು. ಸಂತ್ರಸ್ತರಿಗೆ ನೆರವಾದ ಸಂಘ-ಸಂಸ್ಥೆಗಳಿಗೂ ಸಚಿವರು ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚ್ಚೂರು ಮೋನು, ಸದಸ್ಯ ನೂರುದ್ದೀನ್ ಸಾಲ್ಮರ, ಸುಳ್ಯ ತಾಲೂಕು ಪಂಚಾಯ್ತಿ ಸದಸ್ಯೆ ಪುಷ್ಪಾ ಮೇದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಕೆಪಕ್ ನಿರ್ದೇಶಕ ಪಿ.ಎ. ಮಹಮ್ಮದ್, ಡಾ. ರಘೂ, ಟಿ.ಎಂ. ಜಾವೇದ್, ಸಿದ್ದಿಕ್ ಕೊಕ್ಕೋ, ಸಂಪಾಜೆ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್, ಕೊಡಗು ಕಾಂಗ್ರೆಸ್ ಮುಖಂಡ ಕೆಟಿಎಸ್ ಬಷೀರ್ ಆಝಾದ್ ನಗರ ಮತ್ತಿತರರು ಹಾಜರಿದ್ದರು. ಅಶ್ರಫ್ ಗುಂಡಿ ಕಾರ್ಯಕ್ರಮ ನಿರ್ವಹಿಸಿದರು.