ಸೋಮವಾರಪೇಟೆ, ಅ. 17: ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಖಾಲಿ ಕುರ್ಚಿಗಳೇ ಕಂಡುಬಂದವು.

ಸಭೆಯಲ್ಲಿ ಭಾಗವಹಿಸಿದ್ದ ಐದಾರು ಮಂದಿ ಸಾರ್ವಜನಿಕರು, ಮಳೆಗಾಲದ ಸಂದರ್ಭ ವಿದ್ಯುತ್ ಇಲಾಖಾ ಲೈನ್‍ಮೆನ್ ಮತ್ತು ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರಲ್ಲದೇ, ಕೆಲವೆಡೆ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿದ್ದು ಬದಲಾಯಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮೈಸೂರು ಕೊಡಗು ವಿಭಾಗದ ಅಧೀಕ್ಷಕ ಅಭಿಯಂತರ ಪ್ರತಾಪ್, ಕಾರ್ಯನಿರ್ವಾಹಕ ಅಭಿಯಂತರರಾದ ಸೋಮಶೇಖರ್, ತಾರಾ, ಸಹಾಯಕ ಕಾರ್ಯಪಾಲಕ ಅಭಿಯಂತರ ದೇವಯ್ಯ, ಧನಂಜಯ್, ಸಹಾಯಕ ಅಭಿಯಂತರ ಸಂತೋಷ್ ಅವರುಗಳು ಉಪಸ್ಥಿತರಿದ್ದರು.