ಮಡಿಕೇರಿ, ಅ. 17: ಪೊನ್ನಂಪೇಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿಯವರ ಸರಳ ಜೀವನ, ಸತ್ಯ, ಸ್ವಾತಂತ್ರ್ಯ ಹೋರಾಟದಲ್ಲಿ ನಡೆಸಿದ ಬಗ್ಗೆ ಭಾಷಣ ಮಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಆಗಮಿಸಿ, ವಿದ್ಯಾರ್ಥಿಗಳಿಗೆ ‘ಸ್ವಚ್ಛ ಭಾರತ್’ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾಗಿ ಕೊಳೇರ ದಯ ಚಂಗಪ್ಪ ಪಾಲ್ಗೊಂಡಿದ್ದರು.

ಸಂಪನ್ಮೂಲ ವ್ಯಕ್ತಿ ಟಿ.ಬಿ. ಜೀವನ್ ಬಹುಮಾನ ವಿತರಿಸಿದರು. ವಿ.ಜೆ. ಫಿಲೋಮಿನ ಗಾಂಧೀಜಿಯವರ ಬಗ್ಗೆ ಕವಿತೆ ವಾಚಿಸಿದರು. ಸಿ.ಪಿ. ಗಂಗಾಮಣಿ ವಂದಿಸಿದರು. ಬಿ.ಎಂ. ವಿಜಯ್ ಹಾಜರಿದ್ದರು. ವಿ.ಜೆ. ಫಿಲೋಮಿನ ಸ್ವಾಗತಿಸಿ ಹೆಚ್. ಗಂಗಮ್ಮ ನಿರೂಪಿಸಿದರು.