ಸೋಮವಾರಪೇಟೆ, ಅ. 16: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ ಸಂಬಂಧಿಸಿದಂತೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಇಂದು ಬೆಳಗ್ಗೆ ಇಲ್ಲಿನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಯ ಸೋಮವಾರಪೇಟೆ, ಅ. 16: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ ಸಂಬಂಧಿಸಿದಂತೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಇಂದು ಬೆಳಗ್ಗೆ ಇಲ್ಲಿನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಯ ಸೋಮವಾರಪೇಟೆ, ಅ. 16: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ ಸಂಬಂಧಿಸಿದಂತೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಇಂದು ಬೆಳಗ್ಗೆ ಇಲ್ಲಿನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಯ (ಮೊದಲ ಪುಟದಿಂದ) ವರ್ಗ ಬಿ. ಮೀಸಲಾತಿಯಿದ್ದು, ಬಿಜೆಪಿಯಿಂದ ಕೆ.ಜಿ. ಸುರೇಶ್, ಕಾಂಗ್ರೆಸ್‍ನಿಂದ ಉದಯಶಂಕರ್, ಪಕ್ಷೇತರರಾಗಿ ಬಿ.ಪಿ. ಶಿವಕುಮಾರ್ ಮತ್ತು ಎಸ್.ಮಹೇಶ್ ಅವರುಗಳು ನಾಮಪತ್ರ ಸಲ್ಲಿಸಿದರು. 2ನೇ ವಾರ್ಡ್(ಬಾಣಾವಾರ ರಸ್ತೆ) ಪರಿಶಿಷ್ಟ ಜಾತಿ ಮೀಸಲಾತಿಯಿದ್ದು ಬಿಜೆಪಿಯಿಂದ ಪಿ.ಕೆ. ಚಂದ್ರು, ಕಾಂಗ್ರೆಸ್‍ನಿಂದ ಮಂಜುನಾಥ್, ಪಕ್ಷೇತರರಾಗಿ ರಘುನಾಥ್ ಅವರುಗಳು ಉಮೇದುವಾರಿಕೆ ಸಲ್ಲಿಸಿದರು.

3ನೇ ವಾರ್ಡ್(ವೆಂಕಟೇಶ್ವರ ಬ್ಲಾಕ್) ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಬಿಜೆಪಿಯಿಂದ ನಳಿನಿ ಗಣೇಶ್, ಜೆಡಿಎಸ್‍ನಿಂದ ಕೆ.ಎಂ. ಪುಷ್ಪ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನೀಲಾವತಿ, 4ನೇ ವಾರ್ಡ್ (ರೇಂಜರ್ ಬ್ಲಾಕ್-1ನೇ ಹಂತ) ಸಾಮಾನ್ಯ ಮೀಸಲಾತಿಯಿದ್ದು, ಬಿಜೆಪಿಯಿಂದ ಎನ್.ಎಸ್. ಮೂರ್ತಿ, ಕಾಂಗ್ರೆಸ್‍ನಿಂದ ಸಂಜೀವ, 5ನೇ ವಾರ್ಡ್(ದೇವಸ್ಥಾನ ರಸ್ತೆ) ಸಾಮಾನ್ಯ ಮೀಸಲಾತಿಯಿದ್ದು ಬಿಜೆಪಿಯಿಂದ ಬಿ.ಎಂ. ಸುರೇಶ್, ಕಾಂಗ್ರೆಸ್‍ನಿಂದ ಬಿ.ಸಿ. ವೆಂಕಟೇಶ್ ಅವರುಗಳು ನಾಮಪತ್ರ ಸಲ್ಲಿಸಿದರು.

6ನೇ ವಾರ್ಡ್(ವಿಶ್ವೇಶ್ವರಯ್ಯ ಬ್ಲಾಕ್) ಸಾಮಾನ್ಯ ಮಹಿಳೆ ಮೀಸಲಾತಿಯಿದ್ದು, ಬಿಜೆಪಿಯಿಂದ ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್‍ನಿಂದ ಶೀಲಾ ಡಿಸೋಜ, 7ನೇ ವಾರ್ಡ್(ರೇಂಜರ್ ಬ್ಲಾಕ್ 2ನೇ ಹಂತ) ಪರಿಶಿಷ್ಟ ಪಂಗಡ ಮೀಸಲಾತಿಯಿದ್ದು, ಬಿಜೆಪಿಯಿಂದ ದಾಕ್ಷಾಯಿಣಿ, ಜೆಡಿಎಸ್‍ನಿಂದ ಜೀವನ್, 8ನೇ ವಾರ್ಡ್ (ಜನತಾ ಕಾಲೋನಿ) ಸಾಮಾನ್ಯ ಮೀಸಲಾತಿಯಿದ್ದು, ಬಿಜೆಪಿಯಿಂದ ಪ್ರಮೋದ್, ಜೆಡಿಎಸ್‍ನಿಂದ ವೆಂಕಟೇಶ್, ಪಕ್ಷೇತರರಾಗಿ ಶುಭಕರ್ ಮತ್ತು ಮನೋಹರ್ ಅವರುಗಳು ಉಮೇದುವಾರಿಕೆ ನೀಡಿದರು.

9ನೇ ವಾರ್ಡ್(ಸಿದ್ಧಲಿಂಗೇಶ್ವರ ಬ್ಲಾಕ್) ಹಿಂದುಳಿದ ವರ್ಗ ಎ. ಮಹಿಳೆ ಮೀಸಲಾತಿಯಿದ್ದು, ಬಿಜೆಪಿಯಿಂದ ಅನಿತಾ, ಜೆಡಿಎಸ್ ನಿಂದ ನಾಗರತ್ನ, 10ನೇ ವಾರ್ಡ್(ಮಹದೇಶ್ವರ ಬ್ಲಾಕ್) ಸಾಮಾನ್ಯ ಮಹಿಳೆ ಮೀಸಲಾತಿಯಿದ್ದು, ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್, ಬಿಜೆಪಿಯಿಂದ ದಿವ್ಯಾ ಮೋಹನ್, ಪಕ್ಷೇತರ ಅಭ್ಯರ್ಥಿಯಾಗಿ ಗೀತಾ ಹರೀಶ್, 11ನೇ ವಾರ್ಡ್(ಸಿ.ಕೆ.ಸುಬ್ಬಯ್ಯ ರಸ್ತೆ) ಹಿಂದುಳಿದ ವರ್ಗ ಎ. ಮೀಸಲಾತಿಯಿದ್ದು, ಬಿಜೆಪಿಯಿಂದ ಬಿ.ಆರ್. ಮಹೇಶ್, ಕಾಂಗ್ರೆಸ್‍ನಿಂದ ಕೆ.ಎ. ಆದಂ ಅವರುಗಳಿಂದ ನಾಮಪತ್ರ ಸಲ್ಲಿಕೆಯಾಯಿತು. ವಾರ್ಡ್ 1ರಿಂದ ಪತ್ರಕರ್ತ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇವರಿಗೆ ಪತ್ರಕರ್ತರಾದ ಡಿ.ಪಿ. ಲೋಕೇಶ್ ಹಾಗೂ ಎಸ್.ಡಿ. ವಿಜೇತ್ ಅವರುಗಳು ಸೂಚಕರಾಗಿದ್ದಾರೆ. ಪ.ಪಂ.ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪತ್ರಕರ್ತ ರೋರ್ವರು ಉಮೇದುವಾರಿಕೆ ಸಲ್ಲಿಸಿದ್ದು, ಮಹೇಶ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

ತಾಲೂಕು ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಯಾಗಿರುವ ಮಹೇಶ್, ಉಪ ಚುನಾವಣಾಧಿಕಾರಿ ಹೆಚ್.ಬಿ. ಗಣೇಶ್ ಅವರುಗಳು ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದರು.

10 ಮಂದಿ ಮಾಜಿ ಸದಸ್ಯರು ಕಣದಲ್ಲಿ: 11 ವಾರ್ಡ್‍ಗಳಿಗೆ ಸಂಬಂಧಿಸಿದಂತೆ 10 ಮಂದಿ ಪ.ಪಂ. ಮಾಜೀ ಸದಸ್ಯರುಗಳು ಕಣದಲ್ಲಿದ್ದಾರೆ. ಇವರಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರೂ ಇದ್ದು, ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪ.ಪಂ. ಮಾಜೀ ಅಧ್ಯಕ್ಷರುಗಳಾದ ವಿಜಯಲಕ್ಷ್ಮೀ ಸುರೇಶ್, ನಳಿನಿ ಗಣೇಶ್, ಎನ್.ಎಸ್. ಮೂರ್ತಿ, ಮಾಜೀ ಉಪಾಧ್ಯಕ್ಷೆ ಶೀಲಾ ಡಿಸೋಜ, ಮಾಜೀ ಸದಸ್ಯರುಗಳಾದ ಸಂಜೀವ, ಬಿ.ಸಿ. ವೆಂಕಟೇಶ್, ಬಿ.ಎಂ. ಸುರೇಶ್, ದಾಕ್ಷಾಯಿಣಿ, ಜಯಂತಿ ಶಿವಕುಮಾರ್, ಕೆ.ಎ.ಆದಂ ಅವರುಗಳು ಮತ್ತೊಮ್ಮೆ ಆಯ್ಕೆ ಬಯಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಸೋಲಿನ ಭಯದಿಂದ ಮೈತ್ರಿ-ಶಾಸಕ ರಂಜನ್: ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭ ಹಲವಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಾಣಿಜ್ಯ ಮಳಿಗೆ ಹೊಂದಿರುವ ಹೆಗ್ಗಳಿಕೆಗೆ ಸೋಮವಾರಪೇಟೆ ಪ.ಪಂ. ಭಾಜನವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೋಲುವ ಭಯದಿಂದ ಮೈತ್ರಿ ಮಾಡಿಕೊಂಡಿವೆ. ಆದರೂ ಎಲ್ಲಾ 11 ವಾರ್ಡ್ ಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ಶಾಸಕ ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದಲ್ಲಿನ ಬಂಡಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಬಂಡಾಯ ಅಭ್ಯರ್ಥಿಗಳ ಮನ ವೊಲಿಸುವ ಕಾರ್ಯ ಮಾಡುತ್ತೇವೆ. ಅವರುಗಳು ನಾಮಪತ್ರ ವಾಪಸ್ ಪಡೆಯುವ ವಿಶ್ವಾಸವಿದೆ ಎಂದರು.

ಬಿಜೆಪಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ಪಕ್ಷದ ಮುಖಂಡರಾದ ಬಿ.ಡಿ. ಮಂಜುನಾಥ್, ಅಭಿಮನ್ಯುಕುಮಾರ್, ಮನುಕುಮಾರ್ ರೈ, ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಉಪಸ್ಥಿತರಿದ್ದರು.

-ವಿಜಯ್