ಗೋಣಿಕೊಪ್ಪ ಅ. 16: ವೀರಾಜಪೇಟೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಚರ್ಚಾ ಸ್ಪರ್ಧೆಯ ಕನ್ನಡ ವಿಭಾಗದಲ್ಲಿ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿ.ಹೆಚ್. ಯುಕ್ತ ಪ್ರಥಮ ಸ್ಥಾನ, ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಟಿ.ಆರ್. ದಿವ್ಯಾ ದ್ವಿತೀಯ ಬಹುಮಾನ ಗಳಿಸಿದರು. ವೀರಾಜಪೇಟೆ ಕಾವೇರಿ ಕಾಲೇಜಿನ ಪಿ.ಎಸ್. ರೇಷ್ಮಾ ತೃತೀಯ ಸ್ಥಾನ ಪಡೆದರು.

ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಚಿಮ್ಮಣಮಾಡ ಟಿ. ಸುಬ್ಬಯ್ಯ ಸ್ಮರಣಾರ್ಥ ನಡೆದ ಸ್ಪರ್ಧೆಯ ಇಂಗ್ಲಿಷ್ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜಿನ ಎಂ.ಆರ್. ರಿಹಾ ಮುಸ್ಕಾನ್ ಪ್ರಥಮ, ವೀರಾಜಪೇಟೆ ಕಾವೇರಿ ಕಾಲೇಜಿನ ಬಿ.ಎಸ್. ಜಶಾನ್ ಬೋಪಣ್ಣ ದ್ವಿತೀಯ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಬಿ.ಜೆ. ಯಶಿತಾ ತೃತೀಯ ಬಹುಮಾನಗಳಿಸಿದರು.

ಅತಿಥಿ ವಕೀಲ ಚಿಮ್ಮಣಮಾಡ ಎಸ್. ಮಾಚಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯರ ಶ್ರಮದ ಫಲವಾಗಿ ಇಂದು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ತಲೆಎತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣ ಪಡೆಯುವಂತಾಗಿದೆ ಎಂದರು.

ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ದಾನಿಗಳೊಂದಿಗೆ ಕೈಜೋಡಿಸಿ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿರುವದು ಉತ್ತಮ ಚಿಂತನೆ ಎಂದರು. ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ, ದಾನಿ ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ, ಕಾಫಿ ಬೆಳೆಗಾರ ಚಿಮ್ಮಣಮಾಡ ಎಸ್. ಮಾಚಯ್ಯ, ಪ್ರಾಂಶುಪಾಲ ಕೆ. ಪಿ. ಪೊನ್ನಮ್ಮ ಬಹುಮಾನ ವಿತರಿಸಿದರು.