ಗೋಣಿಕೊಪ್ಪ ವರದಿ, ಅ. 16 : ಕಾವೇರಿ ದಸರಾ ಸಮಿತಿ ವತಿಯಿಂದ ದಸರಾ ಪ್ರಯುಕ್ತ ಆಯೋಜಿಸಿರುವ ಪಂಚರಾತ್ರಿ ದಸರಾ ಕಾರ್ಯಕ್ರಮದ ಕಾವೇರಿ ಕಲಾವೇದಿಕೆಯನ್ನು ಕಾವೇರಿ ದಸರಾ ಸಮಿತಿಯ ಹಿರಿಯ ಸದಸ್ಯ ರಾಮಾಚಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ವೃತ್ತ ನಿರೀಕ್ಷಕ ಪಿ. ಕೆ. ರಾಜು ಮಾತನಾಡಿ, ಪೋಷಕರು ಹೆಚ್ಚಾಗಿ ಪುಸ್ತಕ ಓದು ಹವ್ಯಾಸ ಬೆಳೆಸಿಕೊಂಡರೆ ಮಕ್ಕಳು ಕೂಡ ಅದನ್ನೇ ಹೆಚ್ಚಾಗಿ ಪಾಲಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮೊಬೈಲ್ ಬಳಕೆಯಿಂದ ದೂರ ಉಳಿಯುವ ಮೂಲಕ ವಾಸ್ತವವಾಗಿ ಜೀವನ ನಡೆಸಲು ಉತ್ತೇಜನ ನೀಡಬೇಕಿದೆ ಎಂದರು.
ಕಾರ್ಯಾಧ್ಯಕ್ಷ ಬಿ. ಎನ್. ಪ್ರಕಾಶ್ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ನೊಂದಿರುವ ಕೊಡಗಿನಲ್ಲಿ ಸರ್ಕಾರದ ನಿರ್ದೇಶನದಂತೆ ದಸರಾ ಆಚರಣೆ ನಡೆಯುತ್ತಿದೆ. ಇದರಿಂದ ಕೊಡಗು ಒಂದಷ್ಟು ಚೇತರಿಕೆ ಕಾಣಲು ಸಾಧ್ಯವಿದೆ ಎಂದರು.
ಈ ಸಂದರ್ಭ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಹಿರಿಯರಾದ ಕೇಶವಕಾಮತ್, ಅಜಿತ್ ಅಯ್ಯಪ್ಪ, ಮುಕುಂದ, ಬಾಲಕೃಷ್ಣ ರೈ, ವೃತ್ತ ನಿರೀಕ್ಷಕ ದಿವಾಕರ್ ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ಚೇಂದೀರ ಪ್ರಭಾವತಿ ವಂದಿಸಿದರು.
ಮಕ್ಕಳ ದಸರಾ ಕಲರವ
ಸಾಂಸ್ಕøತಿಕ ಕಲರವದಲ್ಲಿ ಮಕ್ಕಳು ವಿವಿಧ ವೇಶದಲ್ಲಿ ಕಾಣಿಸಿಕೊಂಡರು. ಪೌರಾಣಿಕ ಹಿನ್ನೆಲೆ ವಿಷಯದಲ್ಲಿ ಛದ್ಮವೇಶ ಸ್ಪರ್ಧೆ ನಡೆಯಿತು. ಚಾಮುಂಡಿ, ಮಹಿಷಾಸುರ, ಲಕ್ಷ್ಮಿ, ಕಾಳಿ, ಅರ್ಧನಾರೀಶ್ವರ, ಕೃಷ್ಣ, ಶಕುಂತಲಾ, ಆಂಜನೇಯ ಹಾಗೂ ಒನಕೆ ಓಬವ್ವ ವೇಶದಲ್ಲಿ ಕಾಣಿಸಿಕೊಂಡು ಭಕ್ತಿ ಮೂಡಿಸಿದರು. ಪಾಶ್ಚಿಮಾತ್ಯ ಹಾಡಿಗೆ ಹೆಜ್ಜೆ ಹಾಕಿದರು.
ಮಕ್ಕಳ ದಸರಾ ಸಾಂಸ್ಕøತಿಕ ಕಾರ್ಯಕ್ರಮ ವಿಜೇತರು
ಛದ್ಮವೇಶ ಪೌರಾಣಿಕ ಸ್ಪರ್ಧೆ
ಪೂರ್ವ ಪ್ರಾಥಮಿಕ ವಿಭಾಗಕ್ಕೆ ನಡೆದ ಪೌರಾಣಿಕ ಸ್ಪರ್ಧೆಯಲ್ಲಿ ಪೃಥ್ವಿಕೃಷ್ಣ (ಪ್ರ), ಯಶಿಕ್ (ದ್ವಿ), ಧೀಷ್ಮ (ತೃ), 1-4 ರ ವಿಭಾಗದಲ್ಲಿ ವಂದನಾಲಕ್ಷ್ಮಿ (ಪ್ರ), ನಮನ್ ಚಿಣ್ಣಪ್ಪ (ದ್ವಿ), ಸಾಕ್ಷಿ ತಂಗಮ್ಮ (ತೃ), 5-7 ನೇ ತರಗತಿ ವಿಭಾಗದಲ್ಲಿ ಪಿ. ಎ. ಸಾಶಿಬಾ (ಪ್ರ), ಎಂ. ಎಸ್. ಸಾನಿಯ (ದ್ವಿ), ಪ್ರಾಚಿ ತಂಗಮ್ಮ (ತೃ), 8-10 ನೇ ವಿಭಾಗದಲ್ಲಿ ಬಿ. ಎ. ಪ್ರೇಕ್ಷಾ (ಪ್ರ), ಕೆ. ಆರ್. ಮನ (ದ್ವಿ), ಕೆ. ಆರ್. ಪೂಜಾ (ತೃ).
ಪಾಶ್ಚಿಮಾತ್ಯ ನೃತ್ಯ ವಿಭಾಗ
1-4 ನೇ ತರಗತಿ ವಿಭಾಗದಲ್ಲಿ ತನಿಷ್ಟ ಮತ್ತು ತಂಡ (ಪ್ರ), ನಿತೇಶ್ ಮತ್ತು ತಂಡ (ದ್ವಿ), ರವೀಶ್ ಮತ್ತು ತಂಡ (ತೃ), 5-7 ತರಗತಿ ವಿಭಾಗದಲ್ಲಿ ಮಹಿತ್ ಮತ್ತು ತಂಡ (ಪ್ರ), ತಂಗಮ್ಮ ಮತ್ತು ತಂಡ (ದ್ವಿ), ನಾಟ್ಯ ಸಂಕಲ್ಪ ಶಾಲಾ ತಂಡ (ತೃ), 8-10 ನೇ ತರಗತಿ ವಿಭಾಗದಲ್ಲಿ ಭೂಮಿಕ ಮತ್ತು ತಂಡ (ಪ್ರ), ನಿಷ್ಮಾ ಮತ್ತು ತಂಡ (ದ್ವಿ), ಕಳತ್ಮಾಡು ಲಯನ್ಸ್ ತಂಡ (ತೃ) ಸ್ಥಾನ ಗಳಿಸಿದರು. -ವರದಿ : ಸುದ್ದಿಪುತ್ರ