ಸೋಮವಾರಪೇಟೆ,ಅ.16: ಮಹಾಮಳೆಗೆ ಕಾಫಿ ಬೆಳೆಗಾರರು ಇನ್ನಿಲ್ಲದಂತೆ ತತ್ತರಿಸಿರುವ ನಡುವೆಯೇ ಕಾಫಿ ಮಂಡಳಿಯ ಅವೈಜ್ಞಾನಿಕ ಸರ್ವೆಯಿಂದ ಬೆಳೆಗಾರರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳದಿದ್ದರೆ ಕಾಫಿ ಮಂಡಳಿ ಕಚೇರಿಗೆ ಬೀಗ ಜಡಿದು ಹೋರಾಟ ರೂಪಿಸಲಾಗುವದು ಎಂದು ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಪಂ ವ್ಯಾಪ್ತಿಯ ರೈತ ಹೋರಾಟ ಸಮಿತಿ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಹೋರಾಟ ಸಮಿತಿಯ ಸಂಚಾಲಕ ಜಿ.ಎಂ. ಹೂವಯ್ಯ ಅವರು, ತಾಲೂಕಿನಲ್ಲಿ ಮೂರು ತಿಂಗಳ ಕಾಲ ನಿರಂತರ ಮಳೆ ಸುರಿದು ಕೃಷಿ ಫಸಲು ಹಾನಿಯಾಗಿದೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಗಳಲ್ಲಿ ಶೇ.40ರಿಂದ 50ರಷ್ಟು ಕಾಫಿ ಮತ್ತು ಕಾಳುಮೆಣಸು ಹಾನಿಯಾಗಿದ್ದರೂ ಕಾಫಿ ಮಂಡಳಿಯವರು ಸರಿಯಾಗಿ ಸರ್ವೆ ಮಾಡದೆ ಶೇ.20ರಷ್ಟು ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿರುವದರಿಂದ ಕಾಫಿ ಬೆಳೆಗಾರರು ಸರ್ಕಾರದ ಪರಿಹಾರದಿಂದ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.
ಎನ್‍ಡಿಆರ್‍ಎಫ್ ನಿಯಮದಂತೆ ಶೇ.33ರಷ್ಟು ಕಾಫಿ ಹಾನಿಯಾದರೆ ಪರಿಹಾರ ಪಡೆಯಲು ಸಾಧ್ಯ. ಆದರೆ ಮಂಡಳಿಯ ಅಧಿಕಾರಿಗಳ ತಪ್ಪು ವರದಿಯಿಂದ ಬೆಳೆಗಾರರಿಗೆ ಮತ್ತೊಮ್ಮೆ ಅನ್ಯಾಯವಾಗಿದೆ. ಬೆಳೆಗಾರರ ವಿರೋಧಿ ನೀತಿಯನ್ನು ಅನುಸರಿಸುತ್ತ, ಬೆಳೆಗಾರರಿಗೆ ಮಾರಕವಾಗಿರುವ ಕಾಫಿ ಮಂಡಳಿ ಸೋಮವಾರಪೇಟೆ,ಅ.16: ಮಹಾಮಳೆಗೆ ಕಾಫಿ ಬೆಳೆಗಾರರು ಇನ್ನಿಲ್ಲದಂತೆ ತತ್ತರಿಸಿರುವ ನಡುವೆಯೇ ಕಾಫಿ ಮಂಡಳಿಯ ಅವೈಜ್ಞಾನಿಕ ಸರ್ವೆಯಿಂದ ಬೆಳೆಗಾರರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳದಿದ್ದರೆ ಕಾಫಿ ಮಂಡಳಿ ಕಚೇರಿಗೆ ಬೀಗ ಜಡಿದು ಹೋರಾಟ ರೂಪಿಸಲಾಗುವದು ಎಂದು ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಪಂ ವ್ಯಾಪ್ತಿಯ ರೈತ ಹೋರಾಟ ಸಮಿತಿ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಹೋರಾಟ ಸಮಿತಿಯ ಸಂಚಾಲಕ ಜಿ.ಎಂ. ಹೂವಯ್ಯ ಅವರು, ತಾಲೂಕಿನಲ್ಲಿ ಮೂರು ತಿಂಗಳ ಕಾಲ ನಿರಂತರ ಮಳೆ ಸುರಿದು ಕೃಷಿ ಫಸಲು ಹಾನಿಯಾಗಿದೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಗಳಲ್ಲಿ ಶೇ.40ರಿಂದ 50ರಷ್ಟು ಕಾಫಿ ಮತ್ತು ಕಾಳುಮೆಣಸು ಹಾನಿಯಾಗಿದ್ದರೂ ಕಾಫಿ ಮಂಡಳಿಯವರು ಸರಿಯಾಗಿ ಸರ್ವೆ ಮಾಡದೆ ಶೇ.20ರಷ್ಟು ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿರುವದರಿಂದ ಕಾಫಿ ಬೆಳೆಗಾರರು ಸರ್ಕಾರದ ಪರಿಹಾರದಿಂದ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.
ಎನ್‍ಡಿಆರ್‍ಎಫ್ ನಿಯಮದಂತೆ ಶೇ.33ರಷ್ಟು ಕಾಫಿ ಹಾನಿಯಾದರೆ ಪರಿಹಾರ ಪಡೆಯಲು ಸಾಧ್ಯ. ಆದರೆ ಮಂಡಳಿಯ ಅಧಿಕಾರಿಗಳ ತಪ್ಪು ವರದಿಯಿಂದ ಬೆಳೆಗಾರರಿಗೆ ಮತ್ತೊಮ್ಮೆ ಅನ್ಯಾಯವಾಗಿದೆ. ಬೆಳೆಗಾರರ ವಿರೋಧಿ ನೀತಿಯನ್ನು ಅನುಸರಿಸುತ್ತ, ಬೆಳೆಗಾರರಿಗೆ ಮಾರಕವಾಗಿರುವ ಕಾಫಿ ಮಂಡಳಿ ಅವಶ್ಯಕತೆ ಇದೆಯೇ? ಈ ಬಗ್ಗೆ ಬೆಳೆಗಾರರು ತೀರ್ಮಾನ ಮಾಡಬೇಕಾಗಿದೆ ಎಂದು ಹೇಳಿದರು.
ಕಾಫಿ ಮಂಡಳಿಯ ಅಧಿಕಾರಿಗಳು ಸಲ್ಲಿಸಿರುವ ವರದಿಯನ್ನು ಜಿಲ್ಲಾಧಿಕಾರಿಗಳು ಪುನರ್ ಪರಿಶೀಲಿಸಬೇಕು. ಮತ್ತೊಮ್ಮೆ ಸರ್ವೆ ಮಾಡಿ, ವೈಜ್ಞಾನಿಕ ವರದಿಯನ್ನು ಸಲ್ಲಿಸುವಂತೆ ಕಾಫಿ ಮಂಡಳಿ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದ ಹೂವಯ್ಯ ಅವರು, ತಪ್ಪಿದಲ್ಲಿ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಯ ಕಾಫಿ ಬೆಳೆಗಾರರ ಸಹಕಾರದಿಂದ ಸೋಮವಾರಪೇಟೆ ಕಾಫಿ ಮಂಡಳಿಯ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದರು.
ಅವೈಜ್ಞಾನಿಕ ವರದಿ ಸಲ್ಲಿಸಿರುವ ಮಂಡಳಿಯ ಕ್ರಮವನ್ನು ಖಂಡಿಸಿ, ಕಾಫಿ ಗಿಡದ ಬುಡದಲ್ಲಿ ಸುರಿದಿರುವ ಕಾಫಿ ಬೀಜ ಹಾಗು ಎಲೆಗಳನ್ನು ಸಂಗ್ರಹಿಸಿ ತಂದು ಕಚೇರಿ ಒಳಗೆ ಸುರಿಯಲಾಗುವದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ, ಸುಂಟಿಕೊಪ್ಪ ಹೋಬಳಿಯಲ್ಲಿ ಕಾಫಿ ಹಾನಿಯ ಬಗ್ಗೆ ಸರ್ವೆ ನಡೆಸಿ, ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ಸಿಗುವಂತೆ ಕ್ರಮಕೈಗೊಳ್ಳಬೇಕೆಂದು ಸಮಿತಿಯ ಅಧ್ಯಕ್ಷರಾದ ಬಿ.ಪಿ. ಮೊಗಪ್ಪ ಮನವಿ ಮಾಡಿದರು. ಮಹಾಮಳೆಯಿಂದ ಕೃಷಿಕರು ಫಸಲನ್ನು ಕಳೆದುಕೊಂಡಿದ್ದಾರೆ. ಕಾಫಿ ತೋಟಗಳು ರೋಗಪೀಡಿತವಾಗಿದೆ. ಮಣ್ಣಿನ ಫಲವತ್ತತೆ ಕಳೆದುಕೊಂಡಿದ್ದು, ಉತ್ತಮ ಕೃಷಿ ಫಸಲು ಪಡೆಯಲು ಎರಡು ದಶಕಗಳೇ ಬೇಕಾಗಬಹುದು. ಇವೆಲ್ಲಾ ಕಾರಣದಿಂದ ರೈತರು ಸಾಲಗಾರರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿ ಎಚ್.ಕೆ. ತಮ್ಮೇಗೌಡ ಇದ್ದರು.