ಸುಂಟಿಕೊಪ್ಪ, ಅ. 15: ಗೌಡ ಸಂಘ ಸುಂಟಿಕೊಪ್ಪ ನಾಡು ಗೌಡ ಸಂಘದ 3ನೇ ವಾರ್ಷಿಕ ಮಹಾಸಭೆಯ ತಾ.21 ರಂದು ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲ್ಲಿ ಏರ್ಪಡಿಸಲಾಗಿದೆ. ಗೌಡ ಸಂಘ ಸುಂಟಿಕೊಪ್ಪ ನಾಡು ಗೌಡ ಸಂಘದ ಅಧ್ಯಕ್ಷ ಯಂಕನ. ಎಂ. ಉಲ್ಲಾಸ್ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ನಡೆಯಲಿದೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ತರಗತಿಯಲ್ಲಿ ಅತೀ ಹೆಚ್ಚು ಅಂಕಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು. ಎಂದು ಸಂಘದ ಕಾರ್ಯದರ್ಶಿ ಯಂಕನ ಕೌಶಿಕ್ ತಿಳಿಸಿದ್ದಾರೆ.