ಕುಶಾಲನಗರ, ಅ. 15: ಕುಶಾಲನಗರ ಗಂಧದಕೋಟೆ ಮೀನುಮಾರ್ಕೆಟ್ನಲ್ಲಿ ಹಲ್ಲೆ ಮಾಡಿ ದಾಂಧಲೆ ನಡೆಸಿ ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಆಟೋದಲ್ಲಿ ಬಂದ ದುಷ್ಕರ್ಮಿಗಳು ಅಶ್ರಫ್ ಎಂಬವರ ಮೀನು ಅಂಗಡಿ ಧÀ್ವಂಸ ಮಾಡಿದ್ದಾರೆ. ಅಶ್ರಫ್ ಮತ್ತು ಬಿರಾರ್ ಹಾಗೂ ರಜಾಕ್ ಇವರುಗಳಿಗೆ ತೀವ್ರ ಗಾಯಗಳಾಗಿದ್ದು, ಕುಶಾಲನಗರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಲುಕೊಪ್ಪದ ಆನಂದ, ಮಾದಾಪಟ್ಟಣದ ಸುಬ್ಬು ಸೇರಿದಂತೆ 5 ಮಂದಿ ಆರೋಪಿಗಳ ಮೇಲೆ ಅಂಗಡಿ ಮಾಲೀಕ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪಟ್ಟಣ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಡಿ.ವೈ.ಎಸ್ಪಿ ಮುರಳೀಧರ್ ತಿಳಿಸಿದ್ದಾರೆ.