ವೀರಾಜಪೇಟೆ, ಅ.15: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಅ. ತಾ.28 ರಂದು ನಿಗದಿ ಪಡಿಸಿರುವ ಚುನಾವಣೆಗೆ ಮತದಾರರ ಪಟ್ಟಿಗಿಂತಲೂ ಮತದಾರರ ಪಟ್ಟಿಯಲ್ಲಿ ಲೋಪ ದೋಷವೇ ಅಧಿಕವಾಗಿದೆ. ಇದರಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿಯೂ ಪರಿಷ್ಕøತ ಮತದಾರರ ಪಟ್ಟಿ ಕುರಿತು ಆತಂಕ ಮೂಡಿಸಿದೆ.

ಕಳೆದ 2013ರ ಮಾರ್ಚ್ ತಿಂಗಳ 7ರಂದು ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಟ್ಟಣ ಪಂಚಾಯಿತಿಯ ಐದನೇ ವಾರ್ಡ್‍ನಲ್ಲಿದ್ದ ಮತದಾರರು ಕೆಲವರನ್ನು ಮೂರನೇ ವಾರ್ಡ್‍ಗೆ ಸ್ಥಳಾಂತರಿಸುವದು ಈಗ ಮತದಾರರ ಗಮನಕ್ಕೆ ಬಂದಿದೆ. ದಂಪತಿಯ ನಡುವೆ ಹೆಂಡತಿಗೆ ಮೂರನೇ ವಾರ್ಡ್‍ನ ಮತಪಟ್ಟಿಯಲ್ಲಿ ಹೆಸರಿದ್ದರೆ ಗಂಡನಿಗೆ ಐದನೇ ವಾರ್ಡ್‍ನ ಮತದಾರರ ಪಟ್ಟಿಯಲ್ಲಿ ಹೆಸರಿದೆ. ಇದು ಯಾವ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬದು ಮತದಾರನಿಗೆ ಗೊತ್ತಾಗಿಲ್ಲ. ಚುನಾವಣಾ ಸಿಬ್ಬಂದಿಗಳನ್ನು ಕೇಳಿದರೆ ಅದು ಬ್ಲಾಕ್ ಲೆವೆಲ್ ಆಫೀಸರ್ (ಬಿ.ಎಲ್.ಓ) ಅವರಿಂದ ಈ ಅಚಾತುರ್ಯ ನಡೆದಿದೆ. ನಾವೇನೂ ಮಾಡಲಿಕ್ಕಾಗುವದಿಲ್ಲ. ಈಗಿನ ಚುನಾವಣಾ ಅಭ್ಯರ್ಥಿಗಳ ಪ್ರಕಾರ ಮತದಾರರ ಪರಿಷ್ಕರಣೆಯ ಹೊಣೆ ಹೊತ್ತಿರುವ ‘ಬ್ಲಾಕ್ ಲೆವಲ್ ಆಫೀಸರ್’ಗಳು ನಿಗಧಿತ ವಾರ್ಡ್‍ಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸದೆ ಕುಳಿತಲ್ಲೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಿರುವದರಿಂದ ಈ ರೀತಿ ಲೋಪ ಉಂಟಾಗಿದೆ ಎಂದು ಮತದಾರರು ದೂರಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹದಿನೆಂಟು ವಾರ್ಡ್‍ಗಳಿದ್ದು, ಎಲ್ಲ ವಾರ್ಡ್‍ಗಳಲ್ಲಿಯೂ ಮತದಾರರ ಪಟ್ಟಿಯಲ್ಲಿ ವಾರ್ಡ್‍ಗಳಲ್ಲಿ ಮಾತ್ರ ಅದಲು ಬದಲು ಉಂಟಾಗಿದೆ. ಮತದಾರರ ಪಟ್ಟಿ ಪರಿಷ್ಕರಿಸಲು ನಿಗಧಿತ ಫಾರಂನಲ್ಲಿ ನಿಗದಿತ ಸಮಯದಲ್ಲಿ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಈಗಲೂ ಲೋಪ ದೋಷವಿರುವ ಮತದಾರರ ಪಟ್ಟಿಯನ್ನು ಮುಂದುವರೆಸಲಾಗಿದೆ. ಕೆಲವು ವಾರ್ಡ್‍ಗಳಲ್ಲಿ ಮತದಾರರ ಪಟ್ಟಿಯ ಕ್ರಮ ಸಂಖ್ಯೆ ಇತರ ಮಾಹಿತಿ ವಿಳಾಸಗಳು ಸರಿಯಾಗಿದ್ದರೂ ಛಾಯಾಚಿತ್ರ ಮಾತ್ರ ಅದಲು ಬದಲಾಗಿರುವ ಪ್ರಕರಣ ನಡೆದಿದೆ.

ಅಭ್ಯರ್ಥಿಗಳಿಂದ ನೇರ ದೂರು

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ತಾ:10-8-2018ರ ಚುನಾವಣೆಯ ಘೋಷಣೆಯ ದಿನದಿಂದ ಚುನಾವಣೆಗಾಗಿ ಪರಿಷ್ಕರಿಸಿರುವ

ಮತದಾರರ ಪಟ್ಟಿಯನ್ನು ಮುಂದುವರೆಸಬೇಕು ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಆಗಸ್ಟ್ 10ರ ನಂತರ ಸೇರ್ಪಡೆಯಾಗಿರುವ ಮತದಾರರು ಈ ಚುನಾವಣೆಗೆ ಮತದಾರರನ್ನಾಗಿಸಬಾರದು. ದಾಖಲೆ ಪ್ರಕಾರ ಆಗಸ್ಟ್ ತಾ: 10ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ನಾಮಪತ್ರ ಸಲ್ಲಿಸಲು ತಾ. 17-8-18 ಕೊನೆಯ ದಿನಾಂಕವಾಗಿತ್ತು. ಆದರೆ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ತಾ:17ರಂದು ಬೆಳಿಗ್ಗೆ ಚುನಾವಣೆಯನ್ನು ಮುಂದೂಡಿ ಆದೇಶಿಸಿದ್ದರು. ಇದರಿಂದಾಗಿ ಅಕ್ಟೋಬರ್ 28ಕ್ಕೆ ಚುನಾವಣೆಯನ್ನು ನಿಗದಿ ಪಡಿಸಲಾಗಿದೆ. ಹಿಂದಿನ ಚುನಾವಣಾ ಪ್ರಕ್ರಿಯೆ ಮುಂದುವರೆದಿರುವದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ ಎಂದು ಜೆಡಿಎಸ್ ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್ ತಿಳಿಸಿದ್ದಾರೆ.

ಚುನಾವಣಾ ದಿನಾಂಕದ ಹತ್ತು ದಿನಗಳಿಗೆ ಮೊದಲು ಮತದಾರರ ಪಟ್ಟಿಯ ಲೋಪದೋಷಗಳನ್ನು ತಾಲೂಕು ಸಹಾಯಕ ಚುನಾವಣಾಧಿಕಾರಿಯವರು ಪರಿಶೀಲಿಸಿ ಸರಿ ಪಡಿಸುವಂತೆ ಚುನಾವಣಾ ಸ್ಪರ್ಧಾ ಅಭ್ಯರ್ಥಿಗಳಾದ ಡಿ.ಪಿ.ರಾಜೇಶ್, ಬಿ.ಎಸ್. ಸತೀಶ್ ಮತ್ತಿತರರು ಒತ್ತಾಯಿಸಿದ್ದಾರೆ.

ಆಗಸ್ಟ್ ತಿಂಗಳ ಪರಿಷ್ಕøತ ಮತದಾರರ ಮೊದಲ ಪಟ್ಟಿಯಲ್ಲಿ ಹದಿನೆಂಟು ವಾರ್ಡ್‍ಗಳಲ್ಲಿ 13,926 ಮತದಾರರು... ಅಕ್ಟೋಬರ್ ತಿಂಗಳಲ್ಲಿ ಪರಿಷ್ಕøತ ಮತದಾರರ ಎರಡನೇ ಪಟ್ಟಿಯಲ್ಲಿ ಹದಿನೆಂಟು ವಾರ್ಡ್‍ಗಳಿಗೆ ಅಧಿಕೃತವಾಗಿ 11,547 ಎಂದು ತೋರಿಸಲಾಗಿದೆ. ಈಗ ಅ. 28 ರ ಚುನಾವಣೆಗೆ ಹಿಂದಿನ ಈಗಿನ ಎರಡು ಪರಿಷ್ಕøತ ಮತದಾರರ ಪಟ್ಟಿಯಲ್ಲಿ ಯಾವ ಮತದಾರರ ಪಟ್ಟಿಯನ್ನು ಅಧಿಕಾರಿಗಳು ಅಂತಿಮವಾಗಿ ಜಾರಿಗೆ ತರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

-ಡಿಎಂಆರ್