* ಸಿದ್ದಾಪುರ, ಅ. 15: ನೆಲ್ಯಹುದಿಕೇರಿಯಲ್ಲಿರುವ ಅಭ್ಯತ್‍ಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಸಕ್ತ ಅವಧಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೊಂಗೇರ ಬೋಪಯ್ಯ ಹೊರತುಪಡಿಸಿ ಉಳಿದಂತೆ ಭಾರತೀಯ ಜನತಾ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.

ಸಾಲಗಾರ ಕ್ಷೇತ್ರದಿಂದ ತೆರಂಬಳ್ಳಿ ಗಣೇಶ್, ತೋಟಂಬೈಲು ಪ್ರಸನ್ನ, ಕೆದಂಬಾಡಿ ಪ್ರಸನ್ನ, ದೋಲ್ಪಾಡಿ ಅಜಿತ್, ವಸಂತ್ ಕುಮಾರ್ ಹೊಸಮನೆ ವಿಜೇತರಾಗಿದ್ದರೆ ಸಾಲಗಾರರಲ್ಲದ ಕ್ಷೇತ್ರಕ್ಕೆ ಪಾಲಚಂಡ ಅಚ್ಚಯ್ಯ ಅವಿರೋಧ ಆಯ್ಕೆ ಆಗಿದ್ದಾರೆ. ಹಳೆಗದ್ದೆ ಮಾದಪ್ಪ, ನಾಟೋಳಂಡ ಮೇದಪ್ಪ, ತೆರಂಬಳ್ಳಿ ಸುಧ, ವಿಜಯಕುಮಾರ್, ಜಯಕುಮಾರ್ ದೋಲ್ಪಾಡಿ ಮಾಚಯ್ಯ ಪರಾಭವಗೊಂಡವರು. ಪರಿಶಿಷ್ಟ ಜಾತಿ ಮೀಸಲು ಅಭ್ಯರ್ಥಿಯಾಗಿ ಧರ್ಮ ಗೆಲವು ಸಾಧಿಸಿದ್ದು ಜವರಯ್ಯ ಸೋಲನ್ನು ಅನುಭವಿಸಿದ್ದಾರೆ. ಮಹಿಳಾ ಮೀಸಲು ಅಭ್ಯರ್ಥಿಗಳಾಗಿ ಮಡ್ತಲೆ ಹರಿಣಿ, ಸುಧಾರಾಜನ್ ಹಾಗೂ ಬಿಸಿಎಂ(ಎ) ಅಭ್ಯರ್ಥಿಗಳಾಗಿ ಟಿ.ಸಿ.ಅಶೋಕ್ ಹಾಗೂ ಸುನೀಲ್ ಕುಮಾರ್ ವಿಜೇತರಾಗಿದ್ದಾರೆ.

ಭಾರತೀಯ ಜನತಾ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಭಾರತೀಯ ಜನತಾ ಪಕ್ಷದ ಪ್ರಮುಖರಾದ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯತ್ ಸದಸ್ಯ ಅಂಚೆಮನೆ ಸುಧಿ, ವಿ.ಕೆ.ಲೋಕೇಶ್, ಮುರುಳಿ, ಟಿ.ಸಿ.ರಾಮನ್‍ಕುಟ್ಟಿ, ತೋಟಂಬೈಲು ತಿಮ್ಮಯ್ಯ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

-ಅಂಚೆಮನೆ ಸುಧಿ